
ಕಲಬುರಗಿ,ಫೆ.13-ನಿವೃತ್ತ ಎಎಸ್‍ಐ ಒಬ್ಬರ ಮನೆಗೆ ಕನ್ನ ಹಾಕಿರುವ ಕಳ್ಳರು 4.37 ಲಕ್ಷ ರೂ.ಮೌಲ್ಯದ ನಗನಾಣ್ಯ ದೋಚಿಕೊಂಡು ಹೋಗಿರುವ ಘಟನೆ ನಗರದ ದತ್ತ ನಗರದಲ್ಲಿ ನಡೆದಿದೆ.
ನಿವೃತ್ತ ಎಎಸ್‍ಐ ರಾಜಶೇಖರ್ ರಟಕಲ್ ಎಂಬುವವರ ಮನೆ ಬೀಗ ಮುರಿದು ಕಳ್ಳರು ಮನೆಯಲ್ಲಿದ್ದ 106.5 ಗ್ರಾಂ.ಬಂಗಾರ, 213.3 ತೊಲೆ ಬೆಳ್ಳಿ ಮತ್ತು 40 ಸಾವಿರ ರೂ.ನಗದು ಸೇರಿ 4.37 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಬೀದರ್‍ನಲ್ಲಿ ಸಂಬಂಧಿಕರ ನಿಶ್ಚಿತಾರ್ಥ ಕಾರ್ಯಕ್ರಮವಿದ್ದ ಪ್ರಯುಕ್ತ ಇವರು ಕುಟುಂಬ ಸಮೇತ ಬೀದರ್‍ಗೆ ಹೋದ ವೇಳೆಯಲ್ಲಿ ಮನೆ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.























