
ಬೆಂಗಳೂರು, ಮಾ. ೫- ಎಂಇಐ ಕಂಪನಿಯ ಉತ್ಪನ್ನಗಳನ್ನು ಖರೀದಿಸಲು ೪(ಜಿ) ವಿನಾಯಿತಿಯಡಿ ಅನುಮೋದಿಸಿರುವ ಕಾರ್ಯದೇಶಗಳನ್ನು ಕಂಪನಿಗೆ ನೀಡುವ ಕುರಿತು ಹಾಗೂ ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಗೆ ಅಗತ್ಯವಿರುವ ಸಂಪೂರ್ಣ ೧೧ಕೆವಿ ಸ್ವಿಚ್‌ಗೇರ್‌ಗಳನ್ನು ಎಂಇಐ ಕಂಪನಿ ವತಿಯಿಂದ ಖರೀದಿಸುವ ಬಗ್ಗೆ ಮತ್ತು ಎಲ್ಲಾ ಸ್ವಿಚ್‌ಗೇರ್ ದುರಸ್ತಿ ಕಾರ್ಯವನ್ನು ಎಂಇಐ ಕಂಪನಿಗೆ ನೀಡುವ ಕುರಿತು ಮನವಿ ಸಲ್ಲಿಸಲಾಯಿತು.
ಎಂಇಐ ಕಂಪನಿಯ ಅಧ್ಯಕ್ಷರಾದ ಎಸ್. ಮನೋಹರ್ ರವರು ಹಾಗೂ ಅಧಿಕಾರಿಗಳು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೋರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರಾಮ್‌ಪ್ರಸಾದ್ ಮನೋಹರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ೪(ಜಿ) ವಿನಾಯಿತಿಯಡಿ ಅನುಮೋದನೆ ಗೊಂಡಿರುವ ಕಾರ್ಯದೇಶಗಳನ್ನು ಎಂಇಐ ಕಂಪನಿಗೆ ನೀಡುವಂತೆ ವಿನಂತಿಸಲಾಯಿತು. ಜೊತೆಗೆ, ಸಂಸ್ಥೆಗೆ ಅಗತ್ಯವಿರುವ ಸಂಪೂರ್ಣ ೧೧ಕೆವಿ ಸ್ವಿಚ್‌ಗೇರ್‌ಗಳನ್ನು ಎಂಇಐ ಕಂಪನಿ ಮೂಲಕವೇ ಖರೀದಿಸುವಂತೆ ಹಾಗೂ ಎಲ್ಲಾ ಸ್ವಿಚ್‌ಗೇರ್‌ಗಳ ದುರಸ್ತಿ ಕಾರ್ಯವನ್ನು ಕಂಪನಿಗೆ ವಹಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಅನಿತಾ.ಸಿ ಹಾಗೂ ಅಧಿಕಾರಿಗಳಾದ ಶರಣಪ್ಪ, ತಿಮ್ಮಣ್ಣ, ಸಂತೋಷ್ ಮತ್ತು ಮಂಜುನಾಥ್ ಉಪಸ್ಥಿತರಿದ್ದರು.





























