Home ಜಿಲ್ಲೆ ಬೆಂಗಳೂರು ಆರ್ಥಿಕ ಕಾಯ್ದೆ ಖಂಡಿಸಿ ನಾಳೆ ಪ್ರತಿಭಟನೆ

ಆರ್ಥಿಕ ಕಾಯ್ದೆ ಖಂಡಿಸಿ ನಾಳೆ ಪ್ರತಿಭಟನೆ

ಬೆಂಗಳೂರು, ಮಾ. ೨೪- ಅಖಿಲ ಭಾರತ ನಿವೃತ್ತ ಪಿಂಚಣಿದಾರರಿಗೆ ಮತ್ತು ರಾಜ್ಯ ಸರ್ಕಾರಿ ನಿವೃತ್ತ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಪಟ್ಟಂತೆ, ಕೇಂದ್ರ ಸರ್ಕಾರದ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್‌ರವರು ಲೋಕಸಭೆಯಲ್ಲಿ ಮಂಡಿಸಿದ ಅನುಮೋದನೆ ಪಡೆದಿರುವ ೨೦೨೫ರ ಕೇಂದ್ರ ಸರ್ಕಾರದ ಆರ್ಥಿಕ ಕಾಯ್ದೆಯನ್ನು ಹಿಂಪಡೆಯಲು ಒತ್ತಾಯಿಸಲಾಗುತ್ತಿದೆ.

ಇದರ ಜೊತೆಗೆ ರಾಜ್ಯ ಸರ್ಕಾರವು “೭ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಕೂಡಲೇ ಸರ್ಕಾರಿ ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರಿಗೆ ಅನ್ವಯಿಸುವಂತೆ ತಕ್ಷಣವೇ ಜಾರಿಗೊಳಿಸಲಾಗಿದೆ.

ನಿವೃತ್ತಿ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಕಾಯ್ದೆಯನ್ನು ಖಂಡಿಸಿ, ಕೇಂದ್ರ ಸಂಘವು ನಾಳೆ ಬೆಳಗ್ಗೆ ೧೦.೩೦ ರಿಂದ ಮಧ್ಯಾಹ್ನ ೨.೦೦ಗಂಟೆಯವರೆಗೆ “ಕಪ್ಪು ಬಟ್ಟೆ”ಯನ್ನು ಧರಿಸಿ “ಪ್ರತಿಭಟನೆಯನ್ನು ಸರ್ಕಾರಿ ನೌಕರರ ಸಂಘದ ವತಿಯಿಂದ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಡಾ. ಎಲ್. ಬೈರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನ ಸರ್ಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಭಾಗವಹಿಸಬೇಕೆಂದು ಕೋರಿದ್ದಾರೆ.

ಪ್ರತಿಭಟನೆಯನ್ನು ರಾಜ್ಯದ ಜಿಲ್ಲಾ ಘಟಕಗಳು ಮತ್ತು ತಾಲ್ಲೂಕು ಘಟಕಗಳ ಸರ್ಕಾರಿ ನೌಕರರು ಅದೇ ದಿವಸ ಪ್ರತಿಭಟನಾ ಸಭೆ ನಡೆಸಿ, ಜಿಲ್ಲಾ ಘಟಕಗಳು ಜಿಲ್ಲಾಧಿಕಾರಿಗಳಿಗೆ ಮತ್ತು ತಾಲ್ಲೂಕು ಘಟಕಗಳು ತಹಶೀಲ್ದಾರರಿಗೆ ಹಾಗೂ ಕೇಂದ್ರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.