
ಜೇವರಗಿ,ಫೆ.13:ಜೇವರಗಿ ಮತ್ತು ಯಡ್ರಾಮಿ ತಾಲೂಕ ಹೋರಾಟಗಾರರಿಂದ ದೆಹಲಿ ಜಂತರ ಮಂತರನಲ್ಲಿ ಧರಣಿ ನಡೆಸಿ 1949 ಕಾಯ್ದೆ ರದ್ದುಗೊಳಿಸಿ ಮಹಾಭೋದಿ ಮಹಾ ವಿಹಾರ ಸಂಪೂರ್ಣವಾಗಿ ಬೌದ್ಧರಿಗೆ ಒಪ್ಪಿಸಲು ಕೇಂದ್ರ ಮತ್ತು ಬಿಹಾರ ಸರಕಾರವನ್ನು ಆಗ್ರಹಸಿಲಾಯಿತು.
ಈ ಸಂದರ್ಭದಲ್ಲಿ ಯಡ್ರಾಮಿ ತಾಲೂಕ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಯ್ಯಳಪ್ಪ ಎಸ್ ಗಂಗಾಕರ್ ಜೆಡಿಎಸ ಮುಖಂಡ ಗುರಣ್ಣ ಐನಪುರ್, ಬೌದ್ಧ ಮಹಾಸಭಾ ಉಪಾಧ್ಯಕ್ಷ ಹಾಗೂ ವಕೀಲರ ಸಂಘದ ತಾಲೂಕ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ,ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ತಾಲೂಕು ಅಧ್ಯಕ್ಷ ಮರೆಪ್ಪ ಬೇಗಾರ್ ಕಾಂಗ್ರೆಸ್ ಪಕ್ಷದ ವಿಭಾಗದ ಬೀದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಮೈಬೂಬ ಮನಿಯಾರ್ ಮಳ್ಳಿ ,ಸಾತಖೇಡ ಗ್ರಾಮ ಪಂಚಾಯತ್ ಅಧ್ಯಕ್ಷÀ ಮಲ್ಲಪ್ಪ ಹೊಸಮನಿ ಮಾರಡಗಿ, ದಲಿತ ಸೇನೆ ಕಲಬುರಗಿ ಜಿಲ್ಲಾ ಉಪಾಧ್ಯಕ್ಷ ಮಲ್ಲು ಬಡಿಗೇರ್ ಸೇರಿದಂತೆ ಅನೇಕರು ಇದ್ದರು























