Home ಜಿಲ್ಲೆ ಕಲಬುರಗಿ ಕವಿಗಳು ಕಾಲದ ಧ್ವನಿಯಾಗಬೇಕು

ಕವಿಗಳು ಕಾಲದ ಧ್ವನಿಯಾಗಬೇಕು

ಕಲಬುರಗಿ,ಮಾ.24- ಕವಿಗಳು, ಸಾಹಿತಿಗಳು ಸುಮ್ಮನೆ ಕಾವ್ಯ ರಚಿಸದೆ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾಲದ ಧ್ವನಿಯಾಗಬೇಕು ಎಂದು ನಾಡಿನ ಪ್ರಮುಖ ಕವಿ-ಕಥೆಗಾರ ಪೆÇ್ರ. ಸಿ.ಎಸ್.ಆನಂದ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ “ಕವಿ ಕಂಡ ಯುಗಾದಿ” ವಿಶೇಷ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು , ಕವಿತೆ ರಚಿಸುವುದು ಕೇವಲ ಕವಿಯ ಭಾವನೆಗಳ ಅಭಿವ್ಯಕ್ತಿಯಲ್ಲ ಅದೊಂದು ಕ್ಲಿಷ್ಟಕರವಾದ ಸೃಜನಾತ್ಮಕ ಪ್ರಕ್ರಿಯೆ. ಕವಿ ಸಮಾಜದ ಒಂದು ಭಾಗವಾಗಿರುವುದರಿಂದ ಪ್ರಜಾಪ್ರಭುತ್ವ ಮತ್ತು ಭಾರತೀಯ ಸಂವಿಧಾನದ ಆಶಯಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕವಿಗಳಾದ ಪ್ರಭು ನಿಷ್ಠಿ, ಶಕುಂತಲಾ ಪಾಟೀಲ ಜಾವಳಿ, ಜಯಶ್ರೀ ಜಮಾದಾರ, ಅಶ್ವಿನಿ ಪಾಟೀಲ, ವಿದ್ಯಾಧರ ಕಾಂಬಳೆ, ಶರಣು ಅತನೂರ, ಭೀಮರಾಯ ಹೇಮನೂರ, ಜ್ಯೋತಿ ಪಾಟೀಲ, ಶ್ರೀದೇವಿ ಪೆÇೀ.ಪಾಟೀಲ, ಕವಿತಾ .ಪಿ.ಮೋರಾ ಅವರು ವರ್ತಮಾನಕ್ಕೆ ಸ್ಪಂದಿಸುವ ಕವಿತೆ ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು. ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ದಕ್ಷಿಣ ವಲಯ ಕ.ಸಾ.ಪ. ಅಧ್ಯಕ್ಷರಾದ ರವಿಕುಮಾರ ಶಹಾಪುರಕರ, ಧರ್ಮರಾಜ ಜವಳಿ ಗೌರವ ಉಪಸ್ಥಿತರಿದ್ದರು.