Home ಜಿಲ್ಲೆ ಬೆಂಗಳೂರು ಪೀಣ್ಯ ಪ್ರೈಓವರ್ ಸಂಚಾರಕ್ಕೆ ಮುಕ್ತ

ಪೀಣ್ಯ ಪ್ರೈಓವರ್ ಸಂಚಾರಕ್ಕೆ ಮುಕ್ತ

ಬೆಂಗಳೂರು,ಮೇ.೮-ಕೇಬಲ್ ಅಳವಡಿಕೆ ದುರಸ್ತಿ ಹಾಗೂ ಲೋಡ್ ಟೆಸ್ಟ್ ನಡೆಸುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದ ಪೀಣ್ಯ ರಾಷ್ಟ್ರೀಯ ಹೆದ್ದಾರಿ-೪ ರ ಪೀಣ್ಯ ಎಲಿವೇಟೆಡ್ ಪ್ರೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ವೇತುವೆ)ರಸ್ತೆಯನ್ನು ಇಂದಿನಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.


ಕೇಬಲ್ ಅಳವಡಿಕೆ ದುರಸ್ತಿ ಹಾಗೂ ಲೋಡ್ ಟೆಸ್ಟ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಪೀಣ್ಯ ಎಲಿವೇಟೆಡ್ ಪ್ರೈಓವರ್ ರಸ್ತೆಯನ್ನು ಸಂಚಾರಕ್ಕೆ ಮುಕ್ತವಾಗಿದ್ದು,ರಾಜ್ಯದ ೨೨ ಜಿಲ್ಲೆಗಳನ್ನು ಸಂಪರ್ಕಿಸುವ ವಾಹನ ಚಾಲಕರು ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದೆ.


ಪೀಣ್ಯ ಎಲಿವೇಟೆಡ್ ಪ್ರೈಓವರ್ ರಸ್ತೆಯನ್ನು ತಾತ್ಕಾಲಿಕ ಬಂದ್ ಮಾಡಿದ್ದಾಗ ನಾಲ್ಕೈದು ಕಿಮೀ ಸಂಚಾರ ದಟ್ಟಣೆ ಉಂಟಾಗಿ ಗಂಟೆಗಟ್ಟಲೇ ವಾಹನಗಳು ಸಿಲುಕಿ ಪರದಾಡುವಂತಾದ ಪರಿಸ್ಥಿತಿ ನಿವಾರಣೆಯಾಗಿದೆ.
ಪೀಣ್ಯ ಎಲಿವೇಟೆಡ್ ಪ್ರೈಓವರ್ ರಸ್ತೆಯು ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಫ್ಲೈಓವರ್ ಬಂದ್ ಆಗಿದ್ದ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಾಹನ ಸವಾರರು ಈಗ ನಿರಾಳರಾಗಿದ್ದಾರೆ.


ತಾತ್ಕಾಲಿಕ ಬಂದ್ ಆಗಿದ್ದ ಪ್ರೈಓವರ್ ರಸ್ತೆಯು ಸುಮಾರು ೭೨ ಗಂಟೆಗಳ ಬಳಿಕ ಸಂಚಾರಕ್ಕೆ ಮುಕ್ತವಾಗಿದೆ.ಕಳೆದ ಮೇ.೫ ಮುಂಜಾನೆ ೫ ಗಂಟೆಗೆ ಕ್ಲೋಸ್ ಆಗಿದ್ದ ಫ್ಲೈಓವರ್ ೭೨ ಗಂಟೆಗಳ ಬಳಿಕ ಅಂದರೆ ಇಂದು ಬೆಳಿಗ್ಗೆ ೧೧ ಗಂಟೆಗೆ ಮತ್ತೆ ವಾಹನಗಳ ಸಂಚಾರಕ್ಕೆ ಮುಕ್ತಗೊಂಡಿದೆ.


೧,೪೨೨ ಕೇಬಲ್ ಬದಲು:
ಈ ಬಾರಿ ೧,೪೨೨ ಕೇಬಲ್‌ಗಳನ್ನು ಚೇಂಜ್ ಮಾಡಲಾಗಿದ್ದು, ೪ ದಿನಗಳ ಕಾಲ ೩೨ ಟನ್ ಲೋಡ್ ಟೆಸ್ಟಿಂಗ್ ನಡೆಸಲಾಗಿದೆ. ಸುಮಾರು ೧೦ಕ್ಕೂ ಹೆಚ್ಚು ಟ್ರಕ್‌ಗಳಲ್ಲಿ ೩೨ ಟನ್‌ನಷ್ಟು ಲೋಡ್ ಹಾಕಿ ಪರೀಕ್ಷೆ ನಡೆದಿದ್ದು, ಬದಲಾಯಿಸಲಾದ ಕೇಬಲ್‌ಗಳ ಮೊತ್ತ ೩೨ ಕೋಟಿ ರೂ ಎನ್ನಲಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಈ ಕೇಬಲ್‌ಗಳಿಗೆ ಯಾವುದೇ ಹಾನಿಯಾಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನೂ ಎನ್ ಹೆಚ್ ಎಐ ಕೈಗೊಂಡಿದೆ.


ಪೀಣ್ಯ ಮೇಲ್ಸೇತುವೆಯ ಕೆನ್ನಮೆಟಲ್ ವಿಡಿಯಾ ಅಪ್ ರ್‍ಯಾಂಪ್‌ನಿಂದ ಎಸ್‌ಆರ್‌ಎಸ್ ಡೌನ್ ರ್‍ಯಾಂಪ್‌ವರೆಗೆ ಎರಡೂ ಬದಿಯಲ್ಲಿ ವಾಹನ ಸಂಚಾರಕ್ಕೆ ಮೇ ೫ರಿಂದ ಅವಕಾಶವಿರಲಿಲ್ಲ.
ಇಂದು ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಸವಾರರು ನಾ ಮುಂದು ತಾ ಮುಂದು ವಾಹನಗಳನ್ನು ಚಲಾಯಿಸಿದ ದೃಶ್ಯಗಳು ಕಂಡುಬಂದಿವೆ. ಫ್ಲೈ ಓವರ್ ವಾಹನಗಳ ಸಂಚಾರಕ್ಕೆ ಮತ್ತೆ ಮುಕ್ತವಾಗಿರುವ ಕಾರಣ ಟ್ರಾಫಿಕ್ ಸಮಸ್ಯೆ ತುಂಬಾ ಕಡಿಮೆ ಆಗಲಿದೆ ಎಂದು ವಾಹನ ಸವಾರರು ಸಂತಸವನ್ನೂ ವ್ಯಕ್ತಪಡಿಸಿದ್ದಾರೆ.