Home ಜಿಲ್ಲೆ ಚಿತ್ರಕಲಾ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆ

ಚಿತ್ರಕಲಾ ಸ್ಪರ್ಧೆ : ರಾಜ್ಯಮಟ್ಟಕ್ಕೆ ಆಯ್ಕೆ

ರಬಕವಿ-ಬನಹಟ್ಟಿ,ಫೆ3: ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದ ಬನಹಟ್ಟಿಯ ಶ್ರೀಅಕ್ಕಮಹಾದೇವಿ ಬಳಗದ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ವರ್ಗದ ವಿದ್ಯಾರ್ಥಿನಿ ತನುಜಾ ಮ.ಕಾಂತಿ ಧಾರವಾಡದಲ್ಲಿ ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಭಾಗ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿನಿ ತನುಜಾಳನ್ನು ಸಂಸ್ಥೆಯ ಅಧ್ಯಕ್ಷೆ ಪ್ರತಿಭಾ ಶಿವಕುಮಾರÀ ಭದ್ರನ್ನವರ ಹಾಗೂ ಆಡಳಿತ ಮಂಡಳಿ ಸದಸ್ಯರು ಸಿಬ್ಬಂದಿ ಜೊತೆಗೆ ಶಾಲಾ ಆವರಣದಲ್ಲಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ರಾಮಣ್ಣಾ ಭದ್ರನ್ನವರ, ಶಿವಕುಮಾರ ಭದ್ರನ್ನವರ, ಮಾರ್ಗದರ್ಶಕ ಶಿಕ್ಷಕ ಎ.ಸಿ.ಬಾಗಲಕೋಟ, ಎನ್.ಎನ್.ಉಪ್ಪಲದಿನ್ನಿ, ಡಿ.ಕೆ.ದೇವನಾಳ, ಪ್ರಾಥಮಿಕ, ಪ್ರೌಢಶಾಲಾ ಸಿಬ್ಬಂದಿವರ್ಗ, ಮಕ್ಕಳು ಇದ್ದರು.