Home ಮುಖಪುಟ ಸುದ್ದಿ ಹೋರ್ಮುಜ್ ಮುಕ್ತವಾಗಿರುವುದು ಜಗತ್ತಿಗೆ ಅತ್ಯಗತ್ಯಟ್ರಂಪ್ ಜೊತೆ ಚರ್ಚೆ: ಪ್ರಧಾನಿ ಮೋದಿ ಪ್ರತಿಪಾದನೆ

ಹೋರ್ಮುಜ್ ಮುಕ್ತವಾಗಿರುವುದು ಜಗತ್ತಿಗೆ ಅತ್ಯಗತ್ಯಟ್ರಂಪ್ ಜೊತೆ ಚರ್ಚೆ: ಪ್ರಧಾನಿ ಮೋದಿ ಪ್ರತಿಪಾದನೆ


ಹೊಸ ದೆಹಲಿ.ಮಾ೨೫: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಸಂಜೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಹತ್ವದ ಚರ್ಚೆ ನಡೆಸಿದರು. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಸಮರ ಆರಂಭವಾದ ನಂತರ ಉಭಯ ನಾಯಕರ ನಡುವೆ ನಡೆದ ಮೊದಲ ಮಾತುಕತೆ ಇದಾಗಿದೆ.
ಸುಮಾರು ೨೦ ನಿಮಿಷಗಳ ಕಾಲ ನಡೆದ ಈ ಸಂವಾದದಲ್ಲಿ, ಜಾಗತಿಕ ಇಂಧನ ಭದ್ರತೆಯ ದೃಷ್ಟಿಯಿಂದ ’ಹೋರ್ಮುಜ್ ಜಲಸಂಧಿ’ಯನ್ನು ಸುರಕ್ಷಿತವಾಗಿ ಮತ್ತು ಮುಕ್ತವಾಗಿರಿಸುವುದು ಅತ್ಯಂತ ಅವಶ್ಯಕ ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ನೆಲೆಸಲು ಭಾರತವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.


“ಅಧ್ಯಕ್ಷ ಟ್ರಂಪ್ ಅವರೊಂದಿಗೆ ಉಪಯುಕ್ತ ಮಾತುಕತೆ ನಡೆಸಿರುವ ಪ್ರಧಾನಿಮೋದಿ ,ಪಶ್ಚಿಮ ಏಷ್ಯಾದಲ್ಲಿ ತಕ್ಷಣವೇ ಉದ್ವಿಗ್ನತೆ ಕಡಿಮೆಯಾಗಿ ಶಾಂತಿ ಸ್ಥಾಪನೆಯಾಗಬೇಕು ಎಂಬುದು ಭಾರತದ ಆಶಯ. ಹೋರ್ಮುಜ್ ಜಲಸಂಧಿಯು ಜಗತ್ತಿಗೆ ಮುಕ್ತವಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.


ಭಾರತದ ಮೇಲಾಗುವ ಪರಿಣಾಮಗಳೇನು?
ಭಾರತವು ತನ್ನ ಒಟ್ಟು ಕಚ್ಚಾ ತೈಲದ ಸುಮಾರು ಶೇ. ೪೦ ರಷ್ಟನ್ನು ಇರಾಕ್, ಸೌದಿ ಅರೇಬಿಯಾ ಮತ್ತು ಯುಎಇನಿಂದ ಹೋರ್ಮುಜ್ ಜಲಸಂಧಿಯ ಮೂಲಕವೇ ಆಮದು ಮಾಡಿಕೊಳ್ಳುತ್ತದೆ.ಯುದ್ಧದ ಹಿನ್ನೆಲೆಯಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್‌ಗೆ ೧೦೦ ಡಾಲರ್ ಗಡಿ ದಾಟಿದೆ. ಇದು ಭಾರತದ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಲಿದೆ.


ಇರಾನ್ ದಿಗ್ಬಂಧನದ ನಡುವೆಯೂ ಭಾರತದ ನೌಕಾಪಡೆಯ ರಕ್ಷಣೆಯಲ್ಲಿ ಎಲ್‌ಪಿಜಿ ಹೊತ್ತ ಎರಡು ಹಡಗುಗಳು ಮಂಗಳವಾರ ಸುರಕ್ಷಿತವಾಗಿ ಸಂಚರಿಸಿವೆ.


ಇರಾನ್‌ನ ಇಂಧನ ಕೇಂದ್ರಗಳ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಿರುವುದಾಗಿ ಟ್ರಂಪ್ ತಿಳಿಸಿದ್ದಾರೆ. ಇರಾನ್ ಜೊತೆಗಿನ ಸಂಧಾನ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಯುದ್ಧ ವಿರಾಮ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ತಿಳಿಸಿದ್ದಾರೆ.


ಇದೇ ವೇಳೆ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಯುದ್ಧದಿಂದಾಗಿ ಅಡುಗೆ ಅನಿಲ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ ಭಾರತದ ಬಳಿ ಸದ್ಯಕ್ಕೆ ೩.೩೭೨ ಮಿಲಿಯನ್ ಟನ್