Home ಮುಖಪುಟ ಸುದ್ದಿ ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ

ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ

ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಹಿಂಭಾಗ ಬೆನ್ಸನ್ ಟೌನ್‌ನ ಮಸ್ಲಿದ್ ಇ- ಖಾದ್ರಿಯಾದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಇಂದು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ರಿಜ್ವಾನ್ ಅರ್ಷದ್ ಮತ್ತು ಮುಸ್ಲೀಂ ಮುಖಂಡರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.

ಬೆಂಗಳೂರು ಮಾ. ೨೧: ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅತ್ಯಂತ ಅವಶ್ಯ ಎಂದು ತಿಳಿಸಿದರು.

ಅವರು ಇಂದು ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು


ಮಾನವೀಯತೆಯಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳುವುದು ಅವಶ್ಯ. ಭಾರತ ದೇಶ ವಿವಿಧ ಜಾತಿ ಸಂಸ್ಕೃತಿಗಳಿಂದ ಕೂಡಿದೆ. ವಿವಿಧತೆಯಲ್ಲಿ ಏಕತೆಯಿರುವ ನಮ್ಮ ದೇಶದಲ್ಲಿ ಎಲ್ಲರೂ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಪ್ರೀತಿಯನ್ನು ಬೋಧಿಸುತ್ತವೆ ಎಂದರು.
ನಾವು ಪ್ರಾರ್ಥನೆ ಮಾಡುವುದು ದೇವರು ಹಾಗೂ ಮನುಕುಲಕ್ಕೆ. ನಾವೆಲ್ಲ ಮಾನವರಾಗಿ ಕೆಲಸ ಮಾಡಬೇಕು ಇದು ಬಹಳ ಅವಶ್ಯಕ. ಬದುಕಿನ ಸಾರ್ಥಕಕ್ಕೆ ಮಾನವೀಯತೆ ಮತ್ತು ವಿಶ್ವಾಸದಿಂದ ಇರಬೇಕು. ನಮ್ಮ ದೇಶ ಅನೇಕ ಜಾತಿ ಧರ್ಮ ಮತ್ತು ಸಂಸ್ಕೃತಿಗಳಿಂದ ಕೂಡಿದೆ.


ಯಾವುದೇ ಜಾತಿ ಧರ್ಮ ಇದ್ದರೂ ಕೂಡ ನಾವೆಲ್ಲ ಒಟ್ಟಾಗಿ ಬಾಳಬೇಕು. ಯಾವುದೇ ಧರ್ಮ ದ್ವೇಷ ಬೋಧನೆ ಮಾಡಬಾರದು. ಇಸ್ಲಾಂ, ಕ್ರೈಸ್ತ, ಹಿಂದೂ ಧರ್ಮಗಳು ಪ್ರೀತಿಯನ್ನೇ ತೋರಿಸುತ್ತವೆ. ಯಾವುದೇ ಧರ್ಮ ದ್ವೇಷ ಮಾಡುವಂತೆ ಹೇಳಲ್ಲ ಎಂದರು