
ನವದೆಹಲಿ,ಫೆ.೨೬- ನ್ಯಾಯಾಂಗ ಭ್ರಷ್ಟಾಚಾರ ಕುರಿತ ಪಠ್ಯ ಸೇರಿಸಲಾಗಿದ್ದ ೮ನೇ ತರಗತಿಯ ಎನ್‌ಸಿಇಆರ್‌ಟಿ ಪುಸ್ತಕವನ್ನು ಸುಪ್ರೀಂಕೋರ್ಟ್ ನಿಷೇಧಿಸಿದೆ. ಎಲ್ಲಾ ಪುಸ್ತಕಗಳ ಡಿಜಟಲ್ ಕಾಪಿಗಳನ್ನು ತೆಗೆದುಹಾಕುವಂತೆ ಆದೇಶಿಸಿ, ಪುಸ್ತಕಗಳ ಜಪ್ತಿಗೂ ಸೂಚನೆ ನೀಡಿದೆ.
ನ್ಯಾಯಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಮತ್ತು ನ್ಯಾಯಾಂಗದ ಘನತೆಯನ್ನು ಕುಗ್ಗಿಸಲು ಉದ್ದೇಶಪೂರಕವಾಗಿ ನಡೆಸಲಾದ ಕ್ರಮ ಇದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ಹೇಳಿ ಈ ಕುರಿತ ಕೂಲಂಕುಷ ತನಿಖೆ ನಡೆಸಲು ಬಯಸುತ್ತೇವೆ ಎಂದು ಪೀಠ ಹೇಳಿದೆ.
ಇದಕ್ಕೆ ಯಾರು ಹೊಣೆಗಾರರು ಎಂಬುದನ್ನು ಕಂಡು ಹಿಡಿಯುವುದು ನ್ಯಾಯಾಂಗದ ಮುಖ್ಯಸ್ಥರಾಗಿ ನನ್ನ ಕರ್ತವ್ಯ ಈ ಸಂಬಂಧ ತಲೆದಂಡ ಆಗಬೇಕಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಗರಂ ಆಗಿ ಹೇಳಿದರು.
ಈ ಸಂಬಂಧ ಎನ್‌ಸಿಇಆರ್‌ಟಿ ನಿರ್ದೇಶಕರು ಶಾಲಾ ಶಿಕ್ಷಣ ಕಾರ್ಯದರ್ಶಿಗೆ ಶೋಕಾಸ್ ನೋಟಿಸ್ ನೀಡಿರುವ ನ್ಯಾಯಾಲಯ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ. ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಕೂಡಲೇ ತನ್ನ ನಿರ್ದೇಶನವನ್ನು ಪಾಲಿಸುವಂತೆ ಆದೇಶಿಸಿದೆ. ಯಾವುದೇ ವಿಧದಲ್ಲಿ ನಿರ್ದೇಶನಗಳನ್ನು ಉಲ್ಲಂಘಿಸಿದರೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ನ್ಯಾಯಾಲಯ ಎಚ್ಚರಿಸಿದೆ.
ಇಂತಹ ಪಠ್ಯಗಳನ್ನು ನಿಯಂತ್ರಸದಿದ್ದರೆ ನ್ಯಾಯಾಂಗದ ಮೇಲಿನ ಜನರ ನಂಬಿಕೆಯನ್ನು ಇದು ಹಾಳುಮಾಡುತ್ತಿದೆ. ಈ ಸಂಬಂಧಿತ ಯಾರನ್ನು ಶಿಕ್ಷೆ ವಿಧಿಸದೆ ಬಿಡಲಾಗುವುದಿಲ್ಲ ಎಂದು ಮುಖ್ಯ ನ್ಯಾಯ ಮೂರ್ತಿ ನೇತೃತ್ವದ ನ್ಯಾಯಪೀಠ ಹೇಳಿದೆ.
ನಿನ್ನೆಯ ವಿಚಾರಣೆ ಸಂದರ್ಭದಲ್ಲಿ ಎನ್‌ಸಿಇಆರ್ ಟಿ ವಿವರಣೆಯನ್ನು ಮುಖ್ಯ ನ್ಯಾಯಾಧೀಶರಾದ ಸೂರ್ಯಕಾಂತ್ ಪ್ರಸ್ತಾಪಿಸಿ, ಅದರಲ್ಲಿ ಕ್ಷಮೆ ಕೇಳುವ ಬಗ್ಗೆ ಒಂದು ಪದವನ್ನು ಉಲ್ಲೇಖಿಸಿಲ್ಲ. ಬದಲಿಗೆ ಪಠ್ಯವನ್ನು ಸಮರ್ಥಿಸಿಕೊಳ್ಳುವ ಯತ್ನ ನಡೆದಿದೆ ಎಂದು ಕಿಡಿಕಾರಿ ವಿಚಾರಣೆಯನ್ನು ಮಾರ್ಚ್ ೧೧ಕ್ಕೆ ಮುಂದೂಡಿದರು.
ನ್ಯಾಯಾಂಗ ಇಲಾಖೆಯ ಭ್ರಷ್ಟಾಚಾರದ ಬಗ್ಗೆ ಉಲ್ಲೇಖ ಮಾಡಿದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂಕೋರ್ಟ್, ಪ್ರೌಢಶಾಲಾ ೮ ನೇ ತರಗತಿಯ ಎನ್‌ಸಿಇಆರ್‌ಟಿ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ಭ್ರಷ್ಟಾಚಾರ’ದ ಅಧ್ಯಾಯ ಹೊಂದಿರುವ ಎನ್ ಸಿಇ ಆರ್ ಟಿಯ ಸಮಾಜ ವಿಜ್ಞಾನ ಪುಸ್ತಕವನ್ನು ನಿಷೇದಿಸಿದೆ
‘ನ್ಯಾಯಾಂಗ ಭ್ರಷ್ಟಾಚಾರ’ದ ಕುರಿತು ಅಧ್ಯಾಯಗಳನ್ನು ರಚಿಸುವಲ್ಲಿ ತೊಡಗಿರುವ ಯುಜಿಸಿ ಅಥವಾ ಯಾವುದೇ ಸಚಿವಾಲಯದೊಂದಿಗೆ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಸ್ವಯಂ ಪ್ರೇರಿತ” ಪ್ರಕರಣದಲ್ಲಿ, ನ್ಯಾಯಾಲಯದ ಬೇಷರತ್ತಾದ ಕ್ಷಮೆಯಾಚಿಸುತ್ತೇವೆ ಎಂದು ಹೇಳಿದೆ.
ಭಾರತೀಯ ನ್ಯಾಯಾಂಗ ಭ್ರಷ್ಟವಾಗಿದೆ ಮತ್ತು ಪ್ರಕರಣಗಳು ಬಾಕಿ ಇವೆ ಎಂದು ಇಡೀ ಬೋಧನಾ ಸಮುದಾಯಕ್ಕೆ ಹೇಳಲಾಗುತ್ತದೆ ನಂತರ ವಿದ್ಯಾರ್ಥಿಗಳು, ಮತ್ತು ನಂತರ ಪೋಷಕರು. ಆಳವಾದ ಪಿತೂರಿ” ಎಂದು ಹೇಳಿದ್ದಾರೆ.
೩೨ ಪುಸ್ತಕಗಳು ಮಾರಾಟವಾಗಿವೆ ಆದರೆ ಈಗ ಅವುಗಳನ್ನು ಹಿಂಪಡೆಯಲಾಗಿದೆ ಎಂದು ಎಸ್.ಜಿ. ಮೆಹ್ತಾ ಹೇಳಿದರು.
ಪಠ್ಯದಲ್ಲೇನಿದೆ
ಈ ಪಠ್ಯದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ, ಹಲವು ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ದೇಶದಲ್ಲಿ ಸಾಕಾಗುವಷ್ಟು ನ್ಯಾಯಾಧೀಶರು ಇಲ್ಲ ಎಂಬ ಅಂಶವನ್ನು ಪ್ರಸ್ತಾಪಿಸಿದೆ.
ಸುಪ್ರೀಂಕೋರ್ಟ್‌ನಲ್ಲಿ ೮೧ ಸಾವಿರ ಪ್ರಕರಣಗಳು, ವಿವಿಧ ಹೈಕೋರ್ಟ್‌ಗಳಲ್ಲಿ ೬೨.೪ ಲಕ್ಷ ಪ್ರಕರಣಗಳು ಇನ್ನೂ ಇತ್ಯರ್ಥ್ಯವಾಗಿಲ್ಲ. ಇತರೆ ನ್ಯಾಯಾಲಯಗಳಲ್ಲಿ ೪.೭ ಕೋಟಿ ಪ್ರಕರಣಗಳು ಬಾಕಿ ಇವೆ ಎಂಬ ವಿಷಯವನ್ನು ಪ್ರಸ್ತಾಪಿಸಲಾಗಿತ್ತು.






























