
ಸಂಜೆ ವಾಣಿ ವಾರ್ತೆ
ಜಮಖಂಡಿ: ಸೆ.೭:ವ್ಯಕ್ತಿ ಜೀವನದಲ್ಲಿ ಯಾವುದೆ ಒಂದು ಹುದ್ದೆಯಲ್ಲಿ ಎತ್ತರ ಮಟ್ಟಕ್ಕೆ ಬೆಳದು ರಾರಾಜಿಸುತ್ತಿರೊಕ್ಕೆ ಶಿಕ್ಷಕರೆ ಕಾರಣ ಎಂದು ಓಲೇಮಠದ ಪ.ಪೂ.ಶ್ರೀ ಆನಂದ ದೇವರು ಹೇಳಿದರು.
ನಗರದ ಬಸವ ಭವನದಲ್ಲಿ ಶಾಲಾಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ,ಜಿಲ್ಲಾ ಮತ್ತು ತಾಲೂಕಾಡಳಿತ, ಕ್ಷೇತ್ರ ಸಮನ್ವಯಾಧಿಕಾರಿ ಕಾರ್ಯಾಲಯ, ಶಿಕ್ಷಕರ ವಿವಿಧ ಸಂಘಟನೆಗಳು, ಸರಕಾರಿ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ಡಾ ರಾಧಾಕೃಷ್ಣರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ ಮಾತನಾಡಿದ ಅವರು.ಅಶಕ್ತನನ್ನು ಸಶಕ್ತನಾಗಿ ಮಾಡುವ ಶಕ್ತಿ,ಅಜ್ಞಾನಿಯನ್ನಿ ಜ್ನಾನಿ ಮಾಡುವ ಶಕ್ತಿ,ಹಿಂದುಳಿದ ಮಗುವನ್ನ ಸಿಂದುವರೆಗಿನ ವರೆಗೆ ಕರೆದು ಕೊಂಡು ಹೋಗುವ ಶಕ್ತಿ ಅದು ಶಿಕ್ಷಕರಲ್ಲಿ ಮಾತ್ರ ಯಾರೂ ಒಬ್ಬರು ಜೀವನದಲ್ಲಿ ಸಾಧನೆ ಮಾಡಿದ್ದರೆ ಏಳಗೆ ಬಯಸುವರು ಈ ಭೂಮಿಯಲ್ಲಿ ಯಾವುದಾದರೂ ಜಿವಿ ಇದ್ದರೆ ಅದು ಹೆತ್ತ ತಂದೆ ತಾಯಿ ಅದನ್ನ ಬಿಟ್ಟರೆ ಶಿಕ್ಷಕರು ನಮ್ಮ ಬದುಕಿನಲ್ಲಿ ಬದುಕ ಕಟ್ಟವರು ಶಿಕ್ಷಕರು ಮಾತ್ರ ಭಾರತ ದೇಶದಲ್ಲಿ ದೇವರನ್ನು ಬಿಟ್ಟರೆ ದೇವರ ಪ್ರತಿರೂಪ ಶಿಕ್ಷರು ಮಾತ್ರ ಎಂದರು ಆದರಿಂದ ಮಕ್ಕಳಿಗೆ ಅಕ್ಷರ ಜೋತೆಗೆ ಒಳ್ಳೆ ಸಂಸ್ಕಾರ ಭರಿತ ಶಿಕ್ಷಣವನ್ನು ಕಲಿಸಬೇಕೆಂದು ಹೆಳಿದರು.
ಇವತ್ತಿನ ಮಕ್ಕಳು ದುಷ್ಚಟಗಳಿಗೆ ಬಲಿಯಾಗಿ ಹೆತ್ತವರ ಕೊರಳಿನ ಪಟ್ಟಿ ಹಿಡಿಯುವ ಮಟ್ಟಿಗೆ ಬೆಳಿಯುತ್ತಿದ್ದಾರೆ ಆದರಿಂದ ದುಷ್ಚಟಕ್ಕೆ ಬಿದ್ದ ಮಕ್ಕಳಿಗೆ ಅವುಗಳ ಮಾರಕ ಪರಿಣಾಮದ ಕುರಿತು ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದರು ಆದರಿಂದ ಜಮಖಂಡಿ ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರವಚನಗಳ ಮೂಲಕ ದುಷ್ಚಟಗಳಿಂದ ಆಗುವ ಪರಿಣಾಮಗಳನ್ನು ಜನರಿಗೆ ತಿಳುವಳಿಕೆ ನೀಡಿ ವ್ಯಸನ ಮೂಕ್ತ ತಾಲ್ಲೂಕು ಮಾಡುವ ಪಣ ತೊಟ್ಟು ನಾನು ಓಲೆಮಠಕ್ಕೆ ಬಂದಿದಿನಿ ಎಂದರು.
ವಿ.ಪ.ಸದಸ್ಯ ಹನುಮಂತ ನಿರಾಣಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣ ನವರು ಓರ್ವ ಶಿಕ್ಷಕರಾಗಿದ್ದು ದೇಶದ ಉನ್ನತ ಸ್ಥಾನಕ್ಕೇರಿದ್ದರೂ ಸಹ ತಮ್ಮ ಶಿಕ್ಷಕ ವೃತ್ತಿಯನ್ನು ಮಾತ್ರ ಗೌರವಿಸುತ್ತಿದ್ದರು ಎಂದು ಹೇಳಿದರು.ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಕರ್ತವ್ಯ ಮಾಡುವವರು ಶಿಕ್ಷಕರು. ನಾವು ಗುರುವನ್ನು ದೇವರಿಗೆ ಹೋಲಿಸುತ್ತೇವೆ. ಇವರು ಕಾಣುವ ದೇವರು ಶಿಕ್ಷಣ ವೃತ್ತಿ ಅತಿ ಪವಿತ್ರ ವೃತ್ತಿಯಾಗಿದೆ. ಈ ಅವಕಾಶ ಸದುಪಯೊಗ ಪಡಿಸಿಕೊಳ್ಳಬೇಕು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾದ ಜವಾಬ್ದಾರಿಯಿದೆ. ಶಿಕ್ಷಕರಿಗೆ ಗೌರವ ನೀಡಲೇಬೇಕು ಎಂದರು.
ಪಿAಚಣಿಯಬಗ್ಗೆ ಎನ್ ಪಿ.ಎಸ್ ತೆಗೆದು ಓಪಿಎಸ್ ಆಗಬೇಕು ಅದರ ಬಗ್ಗೆ ಸರಕಾರದ ಗಮನ ಹರಿಸುತ್ತೇವೆ ವೇತನ ತಾರತಮ್ಯಕ್ಕೆ ಒಂದು ಸಮೀತಿ ಮಾಡಿದ್ದಾರೆ ಇದ್ದ ತಾರತಮ್ಯವನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತೇವೆ. ಸಿ ಮತ್ತು ಆರ್ ಪೂರ್ಣ ವರದಿ ಲಭ್ಯವಾಗಿಲ್ಲ ವರದಿ ಬಂದ ನಂತರ ವಿಚಾರಿಸುತ್ತೇವೆ. ತಮ್ಮ ಯಾವುದೇ ಬೇಡಿಕೆಯಿರಲಿ ಅದರ ಬಗ್ಗೆ ಗಮನ ಹರಿಸುತ್ತೇವೆ ಎಂದರು.
ಬೆಳಗಾವಿಯ ಡಾ.ಯಲ್ಲಪ್ಪ ಹಿಮ್ಮಡಿ ಉಪನ್ಯಾಸ ನೀಡಿದರು. ತಹಸೀಲದಾರ ಅನೀಲ ಬಡಿಗೇರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸಣ್ಣವರಪ್ರಾಸ್ತಾವಿಕವಾಗಿ ಮಾತನಾಡಿದರು,ಶಿಕ್ಷಣ ಸಂಯೋಜಕ ಸಂಗಮೇಶ ಬಿಜಾಪುರ,ರಮೇಶ ಅವಟಿ ಸ್ವಾಗತಿಸಿದರು ಸವಿತಾ ಶಿರಗುಪ್ಪಿ ಹಾಗೂ ಚಿದಾನಂದ ಜಡಿಮಠ ನಿರೂಪಿಸಿದರು.ಶಿವು ಯಾದವಾಡ ವಂದಿಸಿದರು.
ನಗರ ಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ಉಪಾಧ್ಯಕ್ಷೆ ರೇಖಾ ಕಾಂಬಳೆ, ಸಿ.ಇ.ಟಿ ಪ್ರಾಚಾರ್ಯೆ ಮಂಗಳಾ ನಾಯಕ, ಬಿ.ಇ.ಓ ಅಶೋಕ ಬಸಣ್ಣವರ, ಬಿ.ಆರ್.ಪಿ ಕಾಡೇಶ ಕೋಲೂರ, ಅಕ್ಷರ ದಾಸೋಸ ಸಹಾಯಕ ನಿರ್ದೇಶಕ ಸಿ.ಎಸ್.ಕಲ್ಯಾಣಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಪಂಚಾಕ್ಷರಿ ನಂದೇಶ, ಸಿ.ಎಮ್.ನ್ಯಾಮಗೌಡ, ಕಸಾಪ ಅಧ್ಯಕ್ಷ ಸಂತೋಶ ತಳಕೇರಿ,ಬಸವರಾಜ ಬಾಗೆನ್ನವರ,ಸಿ.ಜಿ.ಕಡಕೋಳ. ಬಿ.ಪಿ.ಅಜ್ಜನವರ,ನರಸಿಂಹ ಕಲ್ಲೋಳಿ,ಭೋಸಲೆ,ವಿಶಾಲ ಜಂಬಗಿ,ಇನ್ನಿತರರಿದ್ದರು.