
ಕಲಬುರಗಿ :ಜೂ.22: ಒಬ್ಬರಿಗೊಬ್ಬರ ಸಂಬಂಧ ಗಟ್ಟಿಗೊಳಿಸಿ, ಅರೋಗ್ಯವಂತ ಸಮಾಜ ಕಟ್ಟುವ ಶಕ್ತಿ ಸಂಗೀತಕ್ಕಿದೆ ಎಂದು ಶಿಕ್ಷಕರ ಸಂಘದ ರಾಜ್ಯ ಮುಖಂಡರಾದ ಚಂದ್ರಕಾಂತ ತಳವಾರ ಹೇಳಿದರು.ಕೆಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯ ಹನುಮಾನ ದೇವಸ್ಥಾನ ಆವರಣದಲ್ಲಿ ಬಡಾವಣೆ ಸಂಗೀತ ಬಳಗದ ವತಿಯಿಂದ “ವಿಶ್ವ ಸಂಗೀತ” ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತ ಸಂಗೀತ ವು ಮನುಷ್ಯನ ಮನಸ್ಸಿನ ಮಲಿನತೆ ಶುಚಿಗೊಳಿಸಿ ಹಲವಾರು ರೋಗಳನ್ನು ಹೋಗಲಾಡಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತ ವಿಶ್ವ ಸಂಗೀತ ದಿನಾಚರಣೆಯು 1982 ಜೂನ್ 21ರಂದು ಫ್ರಾನ್ಸ್ ದೇಶದಲ್ಲಿ ಪ್ರಾರಂಭಿಸಲಾಗಿದ್ದು ಜಗತ್ತಿನಾದ್ಯಂತ ಆಚರಿಲಾಗುತ್ತದೆ. ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕಲಾವಿದರಿಗೆ ಆಶ್ರಯ ನೀಡಿ ಸಂಗೀತ ಆಲಿಸುವದರೊಂದಿಗೆ ಉತ್ತಮ ಆಡಳಿತ ನಡೆಸುತಿದ್ದರು. ಸಂಗೀತ ಕಲಾವಿದರು ಗ್ರಾಮೀಣದಲ್ಲಿ ಭಾಗದಲ್ಲಿ ಹಗಲಿರುಳು ಸೇವೆಗೈದು,ಸಂಧಿಗ್ದ ಪರಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸರಕಾರ ನಿಜವಾದ ಕಲಾವಿದರನ್ನು ಗುರುತಿಸಿ ಸಹಾಯ ಮಾಡಲಿ, ಕಲಾವಿದರು ಸಮಾಜದ ಅಸ್ತಿಯಾಗಿದ್ದಾರೆ ಎಂದು ಹೇಳಿದರು.
ಕೆಎಚ್ ಬಿ ಗ್ರೀನ್ ಪಾರ್ಕ್ ಕ್ಷೇಮಾಭಿವೃದ್ಧಿ ನಿವಾಸಿಗಳ ಸಂಘದ ಉಪಾಧ್ಯಕ್ಷರಾದ ಬಾಲಕೃಷ್ಣ ಕುಲಕರ್ಣಿ, ಮಹಿಳಾ ಮುಖಂಡರಾದ ಅನಿತಾ ಭಕ್ರೆ, ಸುರೇಖಾ ಸಾವಳಗಿ, ದಾಕ್ಷಾಯಣಿ ಮಠ ಬಳಬಟ್ಟಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಸಂಗೀತ ಕಲಾವಿದರಾ ದ ಶರಣಪ್ಪ ಕಟ್ಟಿಮನಿ ಸಾಗನೂರ, ಬಸವರಾಜ ಮದರಿ ಹಿರಾಪುರ, ಲಲಿತಾ ಗೋಲಗೇರಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ದಿಲೀಪಕುಮಾರ ಭಕ್ರೆ, ಉಪನ್ಯಾಸಕರಾದ ರವೀಂದ್ರ ಗುತ್ತೇದಾರ,ಅಘಾದ ನೇತಾಜಿ, ಶಿಕ್ಷಕರಾದ ರಾಮದಾಸ ಪಾಟೀಲ,ನಿತ್ಯಾನಂದ ಮಠ ಬಳಬಟ್ಟಿ, ಮಹಾದೇವಿ ಪ್ರಸನ್ನ, ಸಂಘದ ಸದಸ್ಯರಾದ ಅಮೃತ ನಾಯಕ, ಚಂದ್ರಶೇಖರ ಹರವಾಳ, ರವಿಕುಮಾರ ಗೋಲಗೇರಿ,ಸಿದ್ದಯ್ಯ ಸ್ವಾಮಿ,ರೋಹಿಣಿ ಪಾಟೀಲ, ಗಿರಿಜಾ ಕೌಲಗಿ ಸೇರಿದಂತೆ ಬಡಾವಣೆಯ ಅನೇಕ ಜನ ಭಾಗವಸಿದರು.