
ಕಲಬುರಗಿ,ಮಾ.24-ಬೈಕ್‍ಗೆ ಕಾರು ಡಿಕ್ಕಿ ಹೊಡೆದು ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಸಂಚಾರಿ ಪೊಲೀಸ್ ಠಾಣೆ-1ರ ವ್ಯಾಪ್ತಿಯ ಫರಹತಾಬಾದ ಬಳಿ ಸೋಮವಾರ ನಡೆದಿದೆ.
ಮೃತರನ್ನು ಜೇವರ್ಗಿ ಪಟ್ಟಣದ ಸಾದತ್ ಕಾಲೋನಿಯ ಪರ್ವೀನ್ ಬೇಗಂ ತಂಡ ಫಿರೋಜ್ ಖಾನ್ (32) ಮತ್ತು ಅವರ ಮಗಳು ಆರುಷ ಫಾತಿಮಾ ಫಿರೋಜ್ ಖಾನ್ (2) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಫಿರೋಜ್ ಖಾನ್ ತಂದೆ ಶಬ್ಬೀರ್ ಮತ್ತು ಮುನೇಜಾ ತಂದೆ ಫಿರೋಜಾ ಖಾನ್ ಅವರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಟ್ಟೆ ವ್ಯಾಪಾರಿಯಾಗಿರುವ ಫಿರೋಜ್ ಖಾನ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಜೇವರ್ಗಿಯಿಂದ ಕಲಬುರಗಿ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ಫರಹತಾಬಾದ ಬಳಿ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.
ಕಾರು ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪರ್ವೀನ್ ಬೇಗಂ ಮತ್ತು ಆರುಷಿ ಫಾತಿಮಾ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.



























