
ಅಫಜಲಪುರ :ಮಾ.೧೬: ಕ್ಷೇತ್ರದ ಸಮಗ್ರ ನೀರಾವರಿ ಅಭಿವೃದ್ಧಿಯಿಂದ ಸಮೃದ್ಧಿ ನಾಡು ಕಟ್ಟಲು ಸಾಧ್ಯವಾಗುತ್ತದೆ. ರೈತರಿಂದ ಕೊಳವೆ ಬಾವಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಹಂತ ಹಂತವಾಗಿ ಈಡೇರಿಸಲಾಗುತ್ತದೆ. ಇಲಾಖೆಗಳ ಸಂಬAಧಿಸಿದ ಸಚಿವರಿಗೆ ಹಾಗೂ ನಿಗಮಗಳ ಅಧ್ಯಕ್ಷರಿಗೆ ನಿರಂತರ ಭೇಟಿ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಅನುಮೋದನೆ ನೀಡಲು ಮನವಿ ಮಾಡಿದ್ದೇನೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ ಹೇಳಿದರು.
ತಾಲೂಕಿನ ಮದರಾ.ಬಿ ಗ್ರಾಮದಲ್ಲಿ ಭಾನುವಾರ ಡಿ.ದೇವರಾಜ ಅರಸು ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿ ಇನ್ನುಳಿದ ಸ್ಟೇಷನ್ ಗಾಣಗಾಪುರ ಭಾಗವು ಒಣ ಬೇಸಾಯವಿದ್ದು, ಅಮರ್ಜಾ ಏತ ನೀರಾವರಿ ಮೂಲಕ ಭೀಮಾ ನದಿಯ ಪ್ರವಾಹದ ನೀರನ್ನು ಈ ಭಾಗದ ೧೦ ಕೆರೆಗಳು ಹಾಗೂ ಚೆಕ್ ಡ್ಯಾಮ್‌ಗಳಲ್ಲಿ ನೀರು ತುಂಬುವುದರಿAದ ಅಂತರ್ಜಲದ ಅಭಿವೃದ್ಧಿಯಿಂದ ಕೊಳವೆ ಮತ್ತು ಬಾವಿಗಳಿಗೆ ನೀರಾಗುತ್ತದೆ. ಕ್ಷೇತ್ರದ ಜನರ ತಲಾದಾಯದ ಹೆಚ್ಚಳಕ್ಕೆ ಪೂರಕವಾಗಿ ಕೆಲಸ ಮಾಡಲಾಗುತ್ತಿದೆ. ಸಣ್ಣ ಸಮುದಾಯಗಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲಾಗುತ್ತಿದೆ. ನಮ್ಮ ಮತಕ್ಷೇತ್ರದ ಭೀಮಾ ನದಿಯ ದಂಡೆಯ ಪ್ರದೇಶಕ್ಕೆ ನೀರಾವರಿಯಿಂದ ರೈತರು ವಾಣಿಜ್ಯ ಬೆಳೆಗಳು ಬೆಳೆದು ಅನುಕೂಲವಾಗಿದ್ದು, ನಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ ಕ್ಷೇತ್ರದ ಜನತೆಗೆ ಚಿರಋಣಿಯಾಗಿ ಕೆಲಸ ಮಾಡುತ್ತೇವೆ. ಸರಕಾರ ನಿರಂತರವಾಗಿ ಕೃಷಿ, ತೋಟಗಾರಿಕೆ ಇಲಾಖೆಗಳ ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ಮುಖಾಂತರ ಬೀಜ, ಪಶುಗಳ ಹೊಸ ತಳಿ, ರಸಗೊಬ್ಬರ ಹಾಗೂ ತಾಂತ್ರಿಕರಣದಲ್ಲಿ ಸಂಶೋಧನೆ ನಡೆಯುತ್ತಿದೆ ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮದಾರ ಮಾತನಾಡಿ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಇಂದಿಗೂ ಶೇ.೭೦ ರಷ್ಟು ಜನ ಕೃಷಿಕರಾಗಿದ್ದು, ಅವರ ಶ್ರೇಯೊಭಿವೃದ್ಧಿಗೆ ಶ್ರಮಿಸುತ್ತಿದೆ. ಕೃಷಿಯು ಒಂದು ಜೀವನೋಪಾಯ ಮಾರ್ಗವಾಗಿರದೆ, ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ನಮ್ಮ ಸರಕಾರದ ರೈತಪರ ಯೋಜನೆಗಳಿಂದ ಜನರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ. ನಮ್ಮ ಸರಕಾರವು ಅಭಿವೃದ್ಧಿ ಕೆಲಸದ ಜೊತೆಗೆ ಗ್ಯಾರಂಟಿ ಯೋಜನೆಗಳಿಗೆ ಭರಪೂರ ಹಣ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ ಜಮಾದಾರ, ಸಿದ್ದು ಶಿರಸಗಿ, ಮಹಾರಾಯ ಪೂಜಾರಿ, ಶಿವಪುತ್ರಪ್ಪ ಜಿಡ್ಡಗಿ, ರಾಜುಗೌಡ ಪಾಟೀಲ, ವಿಠ್ಠಲ ಜಾಮಗೊಂಡ, ಯಲ್ಲಣ್ಣಗೌಡ ದಣ್ಣೂರ, ದತ್ತಾತ್ರೇಯ ಬಂಡಗಾರ, ಈರಣ್ಣಗೌಡ ಪಾಟೀಲ, ವಿಜಯಕುಮಾರಗೌಡ ಬಿರಾದಾರ, ಸಿದ್ದು ಜವಳಿ, ಸಚೀನ ಲಿಂಗಶೆಟ್ಟಿ, ಬಂಡಯ್ಯ ಸ್ವಾಮಿ, ಅಸ್ಪಾಕ ಬಂದರಾಡ, ರೇವಣಸಿದ್ದ ನಾಮಗೊಂಡ, ನಾಗರಾಜ ನಿಂಬರಗಿ, ಉಗ್ರಮೂರ್ತಿ ಗುಡೂರ, ಸಿದ್ದುಗೌಡ ಪಾಟೀಲ, ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮುಕ್ತಾ ಇತರರಿದ್ದರು.



























