Home ಜಿಲ್ಲೆ ಬಾವಗಿ ಭದ್ರೆಶ್ವರ ಜಾತ್ರೆ ಪೋಸ್ಟರ್ ಬಿಡುಗಡೆ

ಬಾವಗಿ ಭದ್ರೆಶ್ವರ ಜಾತ್ರೆ ಪೋಸ್ಟರ್ ಬಿಡುಗಡೆ

ಬೀದರ್ :ಮಾ.16:ತಾಲುಕಿನ ಬಾವಗಿ ಐತಿಹಾಸಿಕ ಭದ್ರೇಶ್ವರ ದೇವಸ್ಥಾನ ಜಾತ್ರಾ ಉತ್ಸವ ಎಪ್ರಿಲ್ 3ರಿಂದ 3 ದಿನಗಳ ಕಾಲ ಜರುಗಲಿದೆ 5ರಂದು ರಾತ್ರಿ 9 ಗಂಟೆಗೆ ರಥೋತ್ಸವ ಜರುಗಲಿದೆ’ ಎಂದು ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ಹೇಳಿದರು.

ಭದ್ರೆಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಪೆÇೀಸ್ಟರ್ ಬಿಡುಗಡೆ ಮಾಡಿ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿಜಿ ಮಾತನಾಡಿದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಸ್ರಾರು ಜನ ಭಾಗವಹಿಸಲಿದ್ದು ತಯಾರಿ ನಡೆದಿದೆ. ಎಪ್ರಿಲ್ 3 ರಂದು ಜಾತ್ರಾ ಉದ್ಘಾಟನಾ ನಾಡಿನ ಪೂಜರು ರಾಜಕೀಯ ಗಣ್ಯರಿಂದ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ ಎಪ್ರಿಲ್ 4ರಂದು ರಾತ್ರಿ 9ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಸಕಲ ವಾಧ್ಯಗಳೊಂದಿಗೆ ಗ್ರಾಮದ ಪ್ರಮುಖ ರಸ್ತೆಗಳಿಂದ ಮೆರವಣಿಗೆ ಮುಖಾಂತರ ಸಾಗುವುದು ಎಪ್ರಿಲ್ 5ರಂದು ಬೆಳಿಗ್ಗೆ 5:ಗಂಟೆಗೆ ಪಲ್ಲಕ್ಕಿ ಮೆರವಣಿಗೆ ಅಗ್ನಿ ಬಸವಣ್ಣನಿಗೆ ಪುರವಂತರ ಹಾಗೂ ಭಕ್ತರಿಂದ ಅಗ್ನಿಪ್ರವೇಶ ಮಾಡುವುದು ಬಳಿಕ ಎಪ್ರಿಲ್ 5ರಂದು ರ್ರಾತಿ 9ಗಂಟೆಗೆ ರಥೋತ್ಸವ ಎಂದು ಮಾಹಿತಿ ನೀಡಿದರು.

ಭಕ್ತರಾದ ಶಾಂತವೀರ ಹಜ್ಜರಗಿ ನಾಗಶೆಟ್ಟಿ ಅಳ್ಳಿ ಕಾಶಿನಾಥ್ ಪಕ್ಕ ರಾಜಕುಮಾರ್ ಪಾಟೀಲ್ ಜಗನ್ನಾಥ್ ಚಿದ್ರಿ ಸಂತೋಷ್ ಜಗದಾಳಿ ನಾಗೇಶ್ ಕೋಳರ್ ಗುಂಡಯ್ಯ ಸ್ವಾಮಿ ರಾಜಕುಮಾರ್ ಭದ್ರಾಣ ಭೀಮಣ್ಣ ಕೋಳರ್ ಹಾಗೂ ಇತರರಿದ್ದರು.