
ಸುರಪುರ: ಮಾ.೧೧:ಸರ್ಕಾರ ಬಜೆಟ್ ಮೇಲಿನ ಚರ್ಚೆ ಕುರಿತು ನಡೆಸುತ್ತಿರುವ ಅಧಿವೇಶನದಲ್ಲಿ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿನ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಹಾಗೂ ಲೋಕೋಪಯೋಗಿ ಸಚಿವರಿಗೆ ಮತ್ತು ಕಂದಾಯ ಸಚಿವರಿಗೆ ಪ್ರಶ್ನೆ ಮಾಡುವ ಮೂಲಕ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಸರಕಾರದ ಗಮನ ಸೆಳೆದಿದ್ದಾರೆ.
ಮುಖ್ಯವಾಗಿ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಸಮಸ್ಯೆ ಕುರಿತು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಮಾಡಿದ್ದು ಅಂತರ ಜಿಲ್ಲಾ ಕೂಡು ರಸ್ತೆಗಳು ಮತ್ತು ಅವುಗಳ ದುರಸ್ತಿ ಕಾರ್ಯದ ಕುರಿತು ಪ್ರಶ್ನಿಸಿದ್ದು ಈ ಕುರಿತು ಸ್ವತಃ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರೇ ಲಿಖಿತ ಉತ್ತರ ನೀಡಿ ರಸ್ತೆಯ ದುರಸ್ತಿ ಕಾರ್ಯ ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ರಸ್ತೆಗಳ ಕಿಲೋಮೀಟರ್ ಅಂಕಿ ಅಂಶಗಳ ಸಹಿತ ಉತ್ತರ ನೀಡಿದ್ದಾರೆ.
ಅದರಂತೆ ಮುಖ್ಯಮಂತ್ರಿಗಳಿಗೂ ಶಾಸಕರು ಪ್ರಶ್ನಿಸಿ ಕ್ಷೇತ್ರದಲ್ಲಿನ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯಗಳು ಇಲ್ಲದಿರುವ ಕುರಿತು ಪ್ರಶ್ನೆಸಿದ್ದು, ಮುಖ್ಯಮಂತ್ರಿಗಳು ಈಗ ಇರುವ ಎರಡು ವಸತಿ ನಿಲಯಗಳ ಮತ್ತು ಹೊಸದಾಗಿ ಪ್ರಾರಂಭಿಸಲು ಮಂಜುರಾತಿ ಕೋರಿ ಸೂಕ್ತ ಪ್ರಸ್ತಾವನೆ ಸಲ್ಲಿಸಲು ಕೂಡ ತಿಳಿಸಿ ಪರಿಶೀಲನೆ ಮಾಡಿ ಕ್ರಮ ವಹಿಸುವುದಾಗಿ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.ಅಲ್ಲದೆ ಇದರ ಕುರಿತು ಸದನದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಉತ್ತರಿಸಿ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡುವುದಾಗಿ ತಿಳಿಸಿದ್ದಾರೆ.
ಅದರಂತೆ ಕಂದಾಯ ಇಲಾಖೆಯ ಕುರಿತು ಪ್ರಶ್ನಿಸಿರುವ ಶಾಸಕರು ಉಪನೊಂದಣಾಧಿಕಾರಿಗಳ ಕಚೇರಿಯ ಬಗ್ಗೆಯೂ ಕೂಡ ಗಮನವನ್ನು ಸೆಳೆದಿದ್ದಾರೆ. ಒಟ್ಟಾರೆಯಾಗಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳು ಸಂಬAಧಪಟ್ಟ ಸಚಿವರಿಗೆ ನಿರಂತರವಾಗಿ ಸಂಪರ್ಕಿಸಿ ಆ ಸಮಸ್ಯೆಗಳ ನಿವಾರಣೆಗೆ ಭವಿರತ ಶ್ರಮ ವಹಿಸುತ್ತಿರುವ ಕುರಿತು ಕ್ಷೇತ್ರದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.




























