
ಲಕ್ಷ್ಮೇಶ್ವರ,ಏ26: ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ ಅಗಡಿ ತಾಂತ್ರಿಕ ಮತ್ತು ಯಾಂತ್ರಿಕ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಮಿಲೆಂಜೆ_ 2026 ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಜರುಗಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮುಖ್ಯ ಅತಿಥಿಯಾಗಿ ಮಾತನಾಡಿದ ಬೆಂಗಳೂರಿನ ಹರ್ಮನ್ ಮಿಲ್ಲರ್ ಸಂಸ್ಥೆಯ ಮಹೇಶ್ ಪಾಟೀಲ್ ಅವರು ವಿದ್ಯಾರ್ಥಿಗಳು ಪರಿಶ್ರಮ ಶ್ರದ್ಧೆ ಪ್ರಾಮಾಣಿಕತನ ಇವುಗಳ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದ ಅವರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುವ ಆಧುನಿಕ ತಂತ್ರಜ್ಞಾನವನ್ನು ರೂಡಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಅವರು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಹೊಸ ಹೊಸ ಸಂಶೋಧನೆಗಳ ಮುಖಾಂತರ ಸ್ವತಃ ವಿದ್ಯಾರ್ಥಿಗಳು ಉದ್ಯೋಗಾರ್ತಿಗಳು ಆಗುವ ಬದಲು ಉದ್ಯೋಗ ಪತಿಗಳಾಗಿ ಕಲಿಸಿದ ಶಿಕ್ಷಣ ಸಂಸ್ಥೆಗೆ ಮತ್ತು ಹೆತ್ತ ತಂದೆ ತಾಯಿಗಳಿಗೆ ಕೀರ್ತಿಯನ್ನು ತರಬೇಕು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲು ಭಾಷೆಗಳ ಮೇಲೆ ಪ್ರಭುತ್ವ ಸಾಧಿಸಿ ಜಗತ್ತಿನ ಯಾವುದೇ ಮೂಲೆಯಲ್ಲಿ ಬದುಕಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪರಶುರಾಮ್ ಭಾರ್ತಿಯವರು ಗ್ರಾಮೀಣ ಪ್ರದೇಶದ ಈ ಕಳೆದ ಎರಡು ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ , ದೇಶಕ್ಕೆ ಸಮರ್ಪಿಸಿದೆ. ಇಂದು ಈ ಸಂಸ್ಥೆ ದೇಶದಲ್ಲಿ ಗುರುತಿಸಿಕೊಂಡಿದ್ದರೆ ಅದಕ್ಕೆ ಆಡಳಿತ ಮಂಡಳಿಯವರ ಸಂಪೂರ್ಣ ಸಹಕಾರ ಪೆÇ್ರೀತ್ಸಾಹ ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವೇ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಸುಭಾಷ್ ಮೇಟಿ ವಿಕ್ರಂಶಿರೋಳ ಡಾ. ಆರ್ ಎಂ ಪಾಟೀಲ್ ಡಾ. ಗಿರೀಶ್ ಯತ್ನಳ್ಳಿ ಈರಣ್ಣ ಮಕರಬ್ಬಿ ಪ್ರತಿಮಾ ಮಹಾಪುರಷ ಪೆÇ್ರಫೆಸರ್ ಗಿರೀಶ್ ಹಳ್ಳಿ ಸೇರಿದಂತೆ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ವಿವಿಧ ವಿಭಾಗಗಳಿಂದ ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಪರ್ಧೆಗಳು ಜರುಗಿದವು ಕಾರ್ಯಕ್ರಮವನ್ನು ವರ್ಷಿಣಿ ಮಡಿವಾಳರ ಮತ್ತು ವರ್ಷಿಣಿ ಮಾಳಗಿ ನಿರ್ವಹಿಸಿದರು.






















