ಕೆಸಿಇಡಿಟಿ ಶಾಲೆಯಲ್ಲಿ ಮಾತೃವಂದನಾ ಕಾರ್ಯಕ್ರಮ

ಕಲಬುರಗಿ,ಜ.9-ಶಿಕ್ಷಣವೆಂದರೆ ಕೇವಲ ಅಕ್ಷರಗಳನ್ನು ಕಲಿಸುವದಲ್ಲ. ಮಕ್ಕಳಿಗೆ ಸಂಸ್ಕಾರ ಕಲಿಸುವುದು ಕೂಡ ಶಾಲೆಯಲ್ಲಿ ಆಗಬೇಕು. ಸಂಸ್ಕಾರ ಕಲಿಸುವುದಕ್ಕಾಗಿ ಈ ಮಾತೃವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಪ್ಪಾರಾವ ಅಕ್ಕೋಣಿ ನುಡಿದರು.
ಕೆಸಿಇಡಿಟಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಾತೃವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಂದೆ-ತಾಯಿಯವರಿಗೆ ಪಾದ ಪೂಜೆ ಮಾಡುವ ಮೂಲಕ ಮಕ್ಕಳು ತಂದೆ-ತಾಯಿಗಳನ್ನು, ಗುರುಹಿರಿಯರನ್ನು ಗೌರವಿಸುಸುದನ್ನು ಕಲಿಯಬೇಕು. ಏಕೆಂದರೆ ತಂದೆ-ತಾಯಿಗಳೆ ನಮ್ಮ ಪ್ರತ್ಯಕ್ಷ ದೇವರು ಮುಂದೆ ಮಕ್ಕಳು ದೊಡ್ಡವರಾದಾಗ ತಂದೆ-ತಾಯಿಯರ ಸೇವೆಯನ್ನು ಮಾಡುವುದರ ಮೂಲಕ ಅವರ ಋಣವನ್ನು ತೀರಿಸಬೇಕು ಎಂದು ನುಡಿದರು. ತಂದೆ-ತಾಯಿಗಳು ಕೂಡ ಮಕ್ಕಳನ್ನು ಪ್ರೀತಿಸುವುದರ ಜೊತೆಗೆ ಅವರಿಗೆ ಸಂಸ್ಕಾರವನ್ನು ಕಲಿಸಬೇಕೆಂದು ಹೇಳಿದರು.
ಶಾಲೆಯ ವಿದ್ಯಾಥಿ-ವಿದ್ಯಾರ್ಥಿನಿಯರು ತಮ್ಮ ತಂದೆ-ತಾಯಿಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಸ್ತು ಪ್ರದರ್ಶನವನ್ನು ವಿಶೇಷವಾಗಿ ಕನ್ನಡ ವರ್ಣಮಾಲೆ ಅಂಕಿಗಳು, ಪರಿಸರ, ಬಣ್ಣಗಳು, ಕಾಡುಪ್ರಾಣಿಗಳ ಬಗ್ಗೆ ವಿವಿಧೆ ಪ್ರಾಜೆಕ್ಟ್‍ಗಳ ಮೂಲಕ ತೋರಿಸಿದ್ದು, ವಿಶೇಷವಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಲೋಚನಾ ಅಪ್ಪಾರಾವ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಅವಂಟಿ, ಬಿ.ಕೆ.ಹಳ್ಳಿ, ಡಾ.ಶರಣಬಸಪ್ಪಾ ಗಣಜಲಖೇಡ, ಶಿಕ್ಷಕ, ಶಿಕ್ಷಕಿಯರು, ಪಾಲಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.