Home ಜಿಲ್ಲೆ ಕಲಬುರಗಿ ಕಲ್ಯಾಣ ನಾಡಿನಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ

ಕಲ್ಯಾಣ ನಾಡಿನಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ

ಕಲಬುರಗಿ,ಫೆ 6: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಚಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ ರಾಂಪುರೆ ಅವರು ಎಂದು ಹೈ.ಕ.ಶಿ.ಸಂಸ್ಥೆಯ ಬಾಲಕಯರ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಲಿಂ. ಮಹಾದೇವಪ್ಪ ರಾಂಪುರೆಯವರ 53 ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ.ಮಹೇಶ ಗಂವ್ಹಾರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.
ಮುಂದುವರೆದು ಮಾತನಾಡಿದ ಅವರು ತಮ್ಮ ಪಾಲಕರ ಒತ್ತಾಯದ ಮೇರೆಗೆ ದೂರದ ಕುಂಬಾರಿಯಿಂದ ಕಲಬುರಗಿಗೆ ಬಂದು ತಮ್ಮ ಬದುಕಿನ ಜೊತೆಗೆ ಈ ಭಾಗದ ಜನರು ಬದಕು ಕಟ್ಟಿಕೊಳ್ಳಲು ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕಿದ ಪುಣ್ಯಾತ್ಮ ಎಂದರು.ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕರಾದ ಆನಂದ ಪಾಟೀಲ,ಸವಿತಾ ಪಾಟೀಲ,ಜಾನಕಿ ಪಾಟೀಲ,ಸರಸ್ವತಿ ರಾಜಶ್ರೀ, ಝೈಬಾ ಅಕ್ತರ,ಬೋಧಕೇತರ ಸಿಬ್ಬಂದಿ ಅನಸೂಯಾ ಗಾದಾ,ಪ್ರೀತಿ ಸೊರಡೆ, ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.