
ಬೀದರ್ ಮೇ 08ಃ ಇಂದಿನ ಯುವಕರು ಕೇವಲ ಉದ್ಯೋಗಕ್ಕಾಗಿ ಕಾಯುವ ಮನೋಭಾವವನ್ನು ಬಿಟ್ಟು, ಸ್ವಂತ ಉದ್ಯಮ ಆರಂಭಿಸುವ ದಿಸೆಯಲ್ಲಿ ಮುಂದಾಗಬೇಕು ಎಂದು ರಿಲಯನ್ಸ್ ಜಿಯೋ ಸಹಾಯಕ ಉಪಾಧ್ಯಕ್ಷರಾದ ರಾಜೇಶ್ ಚೆಲ್ವಾ ಅವರು ಕರೆ ನೀಡಿದರು.
ಅವರು ಇತ್ತೀಚಿಗೆ ಬೀದರನ ಪ್ರತಾಪ ನಗರದಲ್ಲಿರುವ ಶಾರದಾ ರೂಢಸೇಡ್ ಸಭಾಂಗಣದಲ್ಲಿ ಏರ್ಪಡಿದ ಕಾರ್ಯಕ್ರಮದಲ್ಲಿ ಲಘು ಉದ್ಯೋಗ 32ನೇ ಭಾರತೀಯ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವು ಜ್ಯೋತಿ ಬೆಳೆಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಮಾತನ್ನು ಉಲ್ಲೇಖಿಸಿ, ತಮ್ಮ ಊರಿಗೆ ಸೇವೆ ಸಲ್ಲಿಸುವ ಆಸೆಯನ್ನು ವ್ಯಕ್ತಪಡಿಸಿದರು. ಉದ್ಯಮಶೀಲತೆ ದೇಶದ ಆರ್ಥಿಕಾಭಿವೃದ್ಧಿಗೆ ಬೆನ್ನೆಲುಬಾಗಿದ್ದು, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಮಂಜುನಾಥ ಹುಗಾರ ಅವರು ಮಾತನಾಡಿ, ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಲಘು ಉದ್ಯೋಗ ಭಾರತಿಯು ವಿವಿಧ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಯುವಜನರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು, ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು ನೀಡುವುದು ಹಾಗೂ ಉದ್ಯಮಿಗಳಿಗೆ ಅಗತ್ಯ ಮಾರ್ಗದರ್ಶನ ನೀಡುವುದು ಸಂಸ್ಥೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ ಹಾಗೂ ಪ್ರಮುಖ ಭಾಷಣಕಾರ ಡಾ. ವೀರೇಂದ್ರ ಶಾಸ್ತ್ರಿ ಗ್ರಾಮೀಣ ಪ್ರದೇಶಗಳಲ್ಲಿಯೂ ಉದ್ಯಮಶೀಲತೆಯನ್ನು ಬೆಳೆಸಲು ಸಂಘಟನೆ ವಿಶೇಷ ಗಮನ ಹರಿಸುತ್ತಿದ್ದು, ಆರ್ಥಿಕ ಸ್ವಾವಲಂಬನೆ ಸಾಧಿಸಲು ಪೆÇ್ರೀತ್ಸಾಹ ನೀಡುತ್ತಿದೆ ಎಂದರು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಲಘು ಉದ್ಯೋಗ ಭಾರತಿಯು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಇಂಪೆÇೀರ್ಟ್ ಎಕ್ಸ್ಪೋರ್ಟ್ ತಜ್ಞ ಸಂತೋμï ಕುಮಾರ್ ಸ್ವಾಮಿ ರೇಕು ನಾಯಕ, ಜ್ಯೋತಿ ಐನಾಪುರ, ಶಶಿಧರ್ ಪಾಟೀಲ್ ಮಾತನಾಡಿದರು. ಅಶೋಕ್ ರೆಜೆಂತಲ್, ಸುರೇಶ್ ಪಾಟೀಲ್, ಇತರರು ವೇದಿಕೆ ಮೇಲಿದ್ದರು.
ಪ್ರಾರಂಭದಲ್ಲಿ ಶಿವಲೀಲಾ ಚಿದ್ರೆ ಪ್ರಾರ್ಥನೆ ಗೀತೆ ಹಾಡಿದರು, ಸಚ್ಚಿದಾನಂದ ಚಿದ್ರೆ ಸ್ವಾಗತಿಸಿದರೆ ಎಸ್. ಗಣಪತಿ ನಿರೂಪಿಸಿ ವಂದಿಸಿದರು.
ಅದೇ ಸಂದರ್ಭದಲ್ಲಿ ಡಾ.ವೀರೇಂದ್ರ ಶಾಸ್ತ್ರಿ, ಅಶೋಕ್ ರೆಜೆಂತಲ್, ಸುರೇಶ್ ಪಾಟೀಲ್, ಮಂಜುನಾಥ ಹುಗಾರ್ ಹಾಗೂ ಸತ್ಯಪ್ರಕಾಶ್ ವಿಶೇಷವಾಗಿ ಭಾರತೀಯ ವಾಯುಪಡೆಯ ನಿವೃತ್ತ ಯೋಧ ಹಾಗೂ ರಿಲಯನ್ಸ್ ಜಿಯೋ ಸಹಾಯಕ ಉಪಾಧ್ಯಕ್ಷರಾದ ರಾಜೇಶ್ ಚೆಲ್ವಾ ಅವರಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಘವೇಂದ್ರ ರೆಜೆಂತಲ್, ಸಿ.ಬಿ. ರೆಡ್ಡಿ, ಶ್ರೀಕಾಂತ್ ಮೋದಿ, ಸ್ಮಿತಾ ಸಬ್ದೆ, ಕಿರಣ, ನಿತಿನ್ ಕರ್ಪೂರ್, ನಿಖಿಲ್ ಗಂಗಶೆಟ್ಟಿ, ಜ್ಯೋತಿ ಕಾಲೆ, ಪ್ರಿಯಾಂಕ ಖೇಣಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.






















