ರಾಣಿ ಅಬ್ಬಕ್ಕ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ

ಕಲಬುರಗಿ ಸೆ 4: ಶಾರದಾ ವಿವೇಕ ಕಲಾ & ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯ ಕಲಬುರಗಿ ಹಾಗೂ
ಸಂಸ್ಕಾರ ಭಾರತಿ ಕಲಬುರಗಿ ಸಹಯೋಗದೊಂದಿಗೆ ಗುರುವಾರ ರಂದು
ರಾಣಿ ಅಬ್ಬಕ್ಕ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು. ಸಂಸ್ಕಾರ ಭಾರತಿ ಪ್ರಾಂತ ಸಂಘಟಕ ಶ್ರೀನೀವಾಸ ಅವರು ಮಕ್ಕಳಿಗೆ ರಾಣಿ ಅಬ್ಬಕ್ಕನ ಸಂಘರ್ಷ ಜೀವನ ತ್ಯಾಗ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಶಾರದಾ ವಿವೇಕ ಕಲಾ & ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಹನಮಂತರಾಯ ಗುಡ್ಡವಾಡಿ.ಸಂಸ್ಕಾರ ಭಾರತಿ ಅಧ್ಯಕ್ಷೆ ಲೀಲಾವತಿ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಡಾ ಅಂಬುಜಾ ಮಳಖೇಡಕರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇತಿಹಾಸ ಉಪನ್ಯಾಸಕ ಮಹೇಶ ತೆಗ್ಗೆಳ್ಳಿ, ನಿರೂಪಿಸಿದರು. ಇಂಗ್ಲಿಷ್ ಉಪನ್ಯಾಸಕ ಸತೀಶಕುಮಾರ ವಂದಿಸಿದರು. ಮಹಾವಿದ್ಯಾಲಯದ ಸಿಬ್ಬಂದಿ ಗುರಲಿಂಗಮ್ಮಾ, ಇನ್ನಿತರರು ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.