ಮಹಿಳೆಯರ ಆರೋಗ್ಯ ಜಾಗೃತಿಗೆ ಚಾಲನೆ

ಬೆಂಗಳೂರು, ಸೆ.೩೦-ನಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮಹಿಳೆಯರ ಆರೋಗ್ಯ-ನೈರ್ಮಲ್ಯ ಜಾಗೃತಿ ಪದ್ಮಶ್ರೀ ಡಾ. ಕಾಮಿನಿ ರಾವ್ ಉದ್ಘಾಟಿಸಿದರು.

ಮಹಿಳೆಯರಿಗೆ ಉಚಿತ ಆರೋಗ್ಯ ಕಿಟ್ ವಿತರಿಸಲಾಯಿತು. ಅಪಾರ್ ಸಂಸ್ಥೆ ವತಿಯಿಂದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ವಿತರಿಸಲಾಯಿತು.ಈ ಶಿಬಿರದಲ್ಲಿ ೧೦೦೦ ಕ್ಕೂ ಹೆಚ್ಚು ರೋಗಿಗಳು ಪಾಲ್ಗೊಂಡು ಲಾಭ ಪಡೆದರು.

ತಾತಗುಣಿ ಬಳಿಯ ಅಗರ ಗ್ರಾಮದಲ್ಲಿರುವ ಮಾತೃಛಾಯಾ ಟ್ರಸ್ಟ್ ಆವರಣದ ಬಿಎಂಎಸ್ ಆಸ್ಪತ್ರೆ ಘಟಕ-೨ ರಲ್ಲಿ ಆಪರೇಷನ್ ಥಿಯೇಟರ್, ಡಯಾಲಿಸಿಸ್ ಸೆಂಟರ್ ಮತ್ತು ಐಸಿಯು ಘಟಕಗಳನ್ನು ಉದ್ಘಾಟಿಸಲಾಯಿತು. ಆಸ್ಪತ್ರೆಯ ಲೈಫ್ ಟ್ರಸ್ಟಿ ಬಿ.ಎಸ್.ರಾಗಿಣಿ ನಾರಾಯಣ ಉದ್ಘಾಟನೆ ನೆರವೇರಿಸಿದರು.

ಟ್ರಸ್ಟಿ ಛೇರ್ಮನ್ ಗೌತಮ್ ಕಲತ್ತೂರ್, ಮಾತೃಛಾಯಾ ಟ್ರಸ್ಟ್ ಸ್ಥಾಪಕ ವಿ. ಕೃಷ್ಣಮೂರ್ತಿ,ಅಗರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಮಂಜುನಾಥ್, ವೈದ್ಯಕೀಯ ನಿರ್ವಾಹಕರಾದ ಡಾ.ಸಂಗಮೇಶ್, ವೈದ್ಯಕೀಯ ನಿರ್ದೇಶಕ ಹಾಗೂ ಮಾತೃಛಾಯಾ ಟ್ರಸ್ಟ್ ಟ್ರಸ್ಟಿ ಡಾ.ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಹಾಜರಿದ್ದರು