Home ಜಿಲ್ಲೆ ಕಲಬುರಗಿ ಕುಮಸಿ ಗ್ರಾ.ಪಂ.ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಕುಮಸಿ ಗ್ರಾ.ಪಂ.ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ

ಕಲಬುರಗಿ,ಏ.7-ವ್ಯಕ್ತಿಯೊಬ್ಬರ ತಂದೆಯ ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯೂಟೇಶನ್ ಮಾಡಿಕೊಡುವ ಸಲುವಾಗಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಒಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಸೋಮವಾರ ನಡೆದಿದೆ.
ಕಲಬುರಗಿ ತಾಲೂಕಿನ ಕುಮಸಿ ಗ್ರಾಮ ಪಂಚಾಯತ್‍ನ ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನ ಬಂಧಿತ ವ್ಯಕ್ತಿಯಾಗಿದ್ದಾರೆ. ಗಣಜಲಖೇಡ ಗ್ರಾಮದ ಅನೀಲಕುಮಾರ್ ರಾಠೋಡ ಅವರು ತಮ್ಮ ತಂದೆಯ
ಹೆಸರಿನಲ್ಲಿರುವ ಜಾಗವನ್ನು ತಾಯಿಯ ಹೆಸರಿಗೆ ಮ್ಯೂಟೇಶನ್ ಮಾಡಿಕೊಡುವ ಸಲುವಾಗಿ ಮಲ್ಲಿಕಾರ್ಜುನ ಅವರು 4,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಮೊತ್ತದಲ್ಲಿ ಈಗಾಗಲೇ ಫೆÇೀನ್‍ಪೇ ಮೂಲಕ 2,000 ರೂ. ಹಣವನ್ನು ಸ್ವೀಕರಿಸಿದ್ದು, ಉಳಿದ 2,000 ರೂ. ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ ಎಂದು
ತಿಳಿದು ಬಂದಿದೆ.
ಲೋಕಾಯುಕ್ತ ಎಸ್‍ಪಿ ಸಿದ್ಧರಾಜು ಸಿ. ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೆÇಲೀಸ್ ಇನ್ಸ್‍ಪೆಕ್ಟರ್-2 ರಾಜಶೇಖರ ಬಡದೆಸಾರ ಅವರ ನೇತೃತ್ವದಲ್ಲಿ ತನಿಖೆ ಕೈಗೊ
ಕೈಗೊಳ್ಳಲಾಗಿದ್ದು, ಆರೋಪದ ಸತ್ಯಾಸತ್ಯತೆ ದೃಢಪಟ್ಟ ಹಿನ್ನೆಲೆಯಲ್ಲಿ ಮಲ್ಲಿಕಾರ್ಜುನರನ್ನು ಬಂಧಿಸಲಾಗಿದೆ.