25.20ಕೋಟಿ ದಾಖಲೆ‌‌ ಮೊತ್ತಕ್ಕೆ ಕೆಮರೂನ್ ಖರೀದಿಸಿದ ಕೆಕೆಆರ್, ವೆಂಕಟೇಶ್ ಆರ್ ಸಿಬಿ ಪಾಲು

ಅಬುಧಾಬಿ, ಡಿ.15- ಇಂದು ಇಲ್ಲಿ ಆರಂಭಾವ ಐಪಿಎಲ್ ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಕೆಮರೂನ್ ಗ್ರೀನ್ ಅವರನ್ನು 25.20 ಕೋಟಿ ದಾಖಲೆ ಮೊತ್ತ ನೀಡಿ ಕೆಕೆ ಆರ್ ಖರೀದಿ ಮಾಡಿದೆ.


ಇದರೊಂದಿಗೆ ದಾಖಲೆ ಮೊತ್ತಕ್ಕೆ ಬಿಕರಿಯಾದ ವಿದೇಶಿ ಆಟಗಾರನೆಂಬ ಕೀರ್ತಿಗೆ ಗ್ರೀನ್ ಭಾಜನರಾಗಿದ್ದಾರೆ.


ಅಬುಧಾಬಿಯಲ್ಲಿಂದು ಆರಂಭವಾದ ಈ ಮಿನಿ ಹರಾಜಿನಲ್ಲಿ ಮೊದಲ ಸೆಟ್ ನಲ್ಲಿ 2 ಕೋಟಿ ಮುಖಬೆಲೆ ಹೊಂದಿದ್ದ ಗ್ರೀನ್ ಅವರನ್ನು ಖರೀದಿಸಲು ಫ್ರಾಂಚೈಸಿಗಳ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು.


ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಗ್ರೀನ್ ಅವರನ್ನು ಖರೀದಿಸಲು ಆರಂಭದಲ್ಲಿ ಆಸಕ್ತಿ ತೋರಿಸಿತ್ತು. ಆದರೆ ಫ್ರಾಂಚೈಸಿ ಬಳಿ ಹಣವಿಲ್ಲದ ಕಾರಣ ಹೊರಗುಳಿದರು.


ಗ್ರೀನ್ ಖರೀದಿಗೆ ಸಿಎಸ್ ಕೆ ಹಾಗೂ ಕೆಕೆಆರ್ ಖರೀದಿಗೆ ತೀವ್ರ ಪೈಪೋಟಿ ಕಂಡು ಬಂತು. ಅಂತಿಮವಾಗಿ ಕೆಕೆಆರ್ 25.20 ಕೋಟಿ ರೂ.ಗೆ ಖರೀದಿಸಿತು. ಈ ಹಿಂದೆ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಮಾರಾಟ ವಾಗಿದ್ದರು. ಈಗ ಆಸ್ಟ್ರೇಲಿಯಾದವರಾದ ಗ್ರೀನ್ ಈ ದಾಖಲೆಯನ್ನು ಮುರಿದಿದ್ದಾರೆ.


ಇದೇ ವೇಳೆ ವೆಂಕಟೇಶ್ ಅಯ್ಯರ್ ಖರೀದಿಗಾಗಿ ಆರ್ ಸಿಬಿ ಮತ್ತು ಕೆಕೆಆರ್ ನಡುವೆ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 7 ಕೋಟಿ ರೂ.ಗೆ ಆರ್ ಸಿಬಿ ಖರೀದಿ ಮಾಡಿತು. ಇದರೊಂದಿಗೆ ಅಲ್ ರೌಂಡರ್ ವೆಂಕಟೇಶ್ ತಂಡಕ್ಕೆ ಸೇರ್ಪಡೆ ಯಾಗಿದ್ದಾರೆ.


ಪ್ರಶಾಂತ್ ವೀರ್ 14.2 ಕೋಟಿ ರೂ.ಗೆ ಸಿಎಸ್ ಕೆ ಪಾಲಾಗಿದ್ದಾರೆ. ಹಾಗೆಯೇ ಅಕಿಬ್ ನಬಿ ದಾರ್ ಅವರನ್ನು 8.4 ಕೋಟಿ ರೂ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.