
ಸೈಮಾ ಪ್ರಶಸ್ತಿ ಪ್ರಕಟ
ಬೆಂಗಳೂರು,ಸೆ.೬: ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIಒಂ ೨೦೨೫) ನಲ್ಲಿ ಕೃಷ್ಣಂ ಪ್ರಣಯಸಖಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇನ್ನು ಮ್ಯಾಕ್ಸ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅತ್ಯತ್ತಮ ನಟ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಆಶಿಕಾ ರಂಗನಾಥ್ ಓ೨ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಾಯಕಿಯಾಗಿ ಪ್ರಶಸ್ತಿ ಮುಡಿಗೇರಿಸಿದ್ದಾರೆ.
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿ, ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಿದ್ದ ’ಯುಐ’ ಸಿನಿಮಾಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಲನಚಿತ್ರೋದ್ಯಮದಲ್ಲಿನ ಅಸಾಧಾರಣ ಪ್ರತಿಭೆಗಳನ್ನು ಗೌರವಿಸುವ ಸಲುವಾಗಿ ಈ ಕಾರ್ಯಕ್ರಮ ಜರುಗುತ್ತದೆ. ದುಬೈನಲ್ಲಿ ೨ ದಿನಗಳ ಕಾಲ ನಡೆಯುವ ಈ ಅವಾರ್ಡ್ ಈವೆಂಟ್‌ನಲ್ಲಿ ದಕ್ಷಿಣ ಭಾರತ ಚಿತ್ರರಂಗದ ತಾರೆಯರು ಒಂದೇ ಸೂರಿನಡಿ ಕಾಣಿಸಿಕೊಳ್ಳುತ್ತಾರೆ..
ಸೌತ್ ಇಂಡಿಯನ್ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ೧೩ನೇ ಆವೃತ್ತಿಯು ದುಬೈ ಎಕ್ಸಿಬ್ಯೂಷನ್ ಸೆಂಟರ್, ಎಕ್ಸ್‌ಪೋ ಸಿಟಿಯಲ್ಲಿ ಜರುಗುತ್ತಿದೆ. ಸೆಪ್ಟೆಂಬರ್ ೫ ಮತ್ತು ೬ರಂದು ಅದ್ಧೂರಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದರು. ಅದರಂತೆ ಇಂದೂ ಕೂಡ ಪ್ರಶಸ್ತಿ ಪ್ರದಾನ ಸಮಾರಂಭವಿದೆ.
ಕನ್ನಡ ಚಿತ್ರರಂಗದ ವಿಜೇತರು:
ಅತ್ಯುತ್ತಮ ಸಿನಿಮಾ – ಕೃಷ್ಣಂ ಪ್ರಣಯ ಸಖಿ.
ಅತ್ಯುತ್ತಮ ನಾಯಕ ನಟ – ಸುದೀಪ್ – ಮ್ಯಾಕ್ಸ್ ಸಿನಿಮಾ.
ಅತ್ಯುತ್ತಮ ನಟಿ – ಆಶಿಕಾ ರಂಗನಾಥ್ – ಔ೨ ಸಿನಿಮಾ.
ಅತ್ಯುತ್ತಮ ನಟ (ಕ್ರಿಟಿಕ್ಸ್) – ದುನಿಯಾ ವಿಜಯ್ – ಭೀಮ ಸಿನಿಮಾ.
ಅತ್ಯುತ್ತಮ ನಿರ್ದೇಶಕ – ಉಪೇಂದ್ರ – ಯುಐ ಸಿನಿಮಾ.
ಅತ್ಯುತ್ತಮ ಚೊಚ್ಚಲ ನಟಿ – ಅಂಕಿತಾ ಅಮರ್ – ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾ.
ಅತ್ಯುತ್ತಮ ಚೊಚ್ಚಲ ನಟ – ಸಮರ್ಜಿತ್ ಲಂಕೇಶ್ – ಗೌರಿ ಸಿನಿಮಾ.
ಭರವಸೆಯ ನಟಿ – ಸಾನ್ಯಾ ಅಯ್ಯರ್ – ಗೌರಿ ಸಿನಿಮಾ.
ಅತ್ಯುತ್ತಮ ಗಾಯಕ – ಜಸ್ಕರಣ್ – ಕೃಷ್ಣಂ ಪ್ರಣಯ ಸಖಿ ಸಿನಿಮಾ.
ಅತ್ಯುತ್ತಮ ಸಂಗೀತ ಸಂಯೋಜನೆ – ಬಿ ಅಜನೀಶ್ ಲೋಕನಾಥ್ – ಮ್ಯಾಕ್ಸ್ ಸಿನಿಮಾ.
ಅತ್ಯುತ್ತಮ ಗೀತೆ ರಚನೆಕಾರ – ನಾಗೇಂದ್ರ ಪ್ರಸಾದ್.
ಅತ್ಯುತ್ತಮ ಹಾಸ್ಯ ನಟ – ಜಾಕ್ ಸಿಂಗಂ – ಭೀಮ ಸಿನಿಮಾ.
ಅತ್ಯುತ್ತಮ ಚೊಚ್ಚಲ ನಿರ್ದೇಶಕ – ಸಂದೀಪ್ ಸುಕಂದ್ – ಶಾಖಾಹಾರಿ ಸಿನಿಮಾ.
ಅತ್ಯುತ್ತಮ ಸಾಂಗ್ ಡಿಸೈನ್ – ಇಮ್ರಾನ್ ಎಸ್ ಸರ್ಧಾರಿಯಾ.
ಅತ್ಯುತ್ತಮ ಕ್ಯಾಮರಾ ವರ್ಕ್ – ಶ್ರೀವತ್ಸನ್ ಸೆಲ್ವರಾಜನ್ – ಇಬ್ಬನಿ ತಬ್ಬಿದ ಇಳೆಯಲಿ.
ಅತ್ಯುತ್ತಮ ಹಿನ್ನೆಲೆ ಗಾಯಕಿ – ಐಶ್ವರ್ಯಾ ರಂಗರಾಜನ್.