
ಹಾಸನ.ಅ೧೯: ಹಾಸನಾಂಬೆ ದರ್ಶನಕ್ಕೆ ಬಂದ ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಹಾಸನಾಂಬೆ ದೇಗುಲದ ಮುಂದೆ ಜೆಡಿಎಸ್ ಪ್ರತಿಭಟನೆ ನಡೆಸಿದೆ. ಜೆಡಿಎಸ್.ಶಾಸಕರಾದ ಎ.ಮಂಜು ಮತ್ತು ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿದೆ.
ದೇವಸ್ಥಾನದ ಎರಡು ಬದಿಯ ರಸ್ತೆ ಬಂದ್ ಮಾಡಿ ಜೆಡಿಎಸ್ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ದೇವಾಲಯದ ಒಳ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ.
ಈ ವೇಳೆ ಜಿಲ್ಲಾಡಳಿತ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದು, ಇದರಿಂದ ದೇವಿಯ ದರ್ಶನಕ್ಕೆ ಶಿಷ್ಟಾಚಾರ ವಾಹನದಲ್ಲಿ ಬಂದ ಗಣ್ಯರು ತೊಂದರೆಗೆ ಸಿಲುಕಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರೋಕೆ ಹೇಳಿ ಎಂದು ಎಸಿಗೆ ತಾಕಿತ್ತು ಮಾಡಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಬ್ಯಾರಿಕೆಡ್ ಗಳನ್ನು ಹೆಚ್ಚಿಸಿದ್ದಾರೆ. ಹಾಸನ ಮಹಾನಗರ ಪಾಲಿಕೆಯ ಮುಂದೆ ಈ ಒಂದು ಪ್ರತಿಭಟನೆ ನಡೆಯುತ್ತಿದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಜೆಡಿಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಎಸಿ ಮಾರುತಿ ಬಂದು ಪ್ರತಿಭಟನಾಕಾರರನ್ನು ಮನವೊಲಿಸುತ್ತಿದ್ದಾರೆ.