Home ಜಿಲ್ಲೆ ಪ್ರಮಾಣ ಪತ್ರ ವಿತರಣೆ

ಪ್ರಮಾಣ ಪತ್ರ ವಿತರಣೆ


ಧಾರವಾಡ,ಮೇ.೮:
ಪ್ರತಿಯೊಬ್ಬ ಮಹಿಳೆಯೂ ಸ್ವಯಂ ಉದ್ಯೋಗದ ತರಬೇತಿ ಪಡೆದರೆ, ಕುಟುಂಬವನ್ನು ಆರ್ಥಿಕವಾಗಿ ಬಲಪಡಿಸಲು ಸಾಧ್ಯ ಎಂದು ಶಂಕರ ಹಲಗತ್ತಿ ಅವರು ಅಭಿಪ್ರಾಯಪಟ್ಟರು.
ನಗರದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಯಶಸ್ವಿ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಮಹಿಳೆಯರ ಹೊಲಿಗೆ ತರಬೇತಿ ಕೇಂದ್ರದ `ಪ್ರೇರಣಾ ಶಿಬಿರ’ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಲ್ಯಾಂಡ್ ಡೆವಲಪರ್ ಬುರಾನ್ ಜಕಾತಿ ಮಾತನಾಡಿ, “ಜೀವನದಲ್ಲಿ ಗುರಿ ಮತ್ತು ಗುರುವಿನ ಮಾರ್ಗದರ್ಶನ ಬಹಳ ಮುಖ್ಯ. ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಸಮಾಜದಲ್ಲಿ ಗೌರವ ತಾನಾಗಿಯೇ ದೊರೆಯುತ್ತದೆ,” ಎಂದರು.


ಅತಿಥಿಗಳಾಗಿ ಭಾಗವಹಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅರವಿಂದ ಏಗನಗೌಡರ ಮಾತನಾಡಿ, “ಮಹಿಳೆಯೂ ಕುಟುಂಬದ ಶಕ್ತಿ. ಸರ್ಕಾರವು ಮಹಿಳೆಯರಿಗಾಗಿಯೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಆರ್ಥಿಕವಾಗಿ ದೊಡ್ಡ ಮಟ್ಟದ ಶಕ್ತಿ ತುಂಬಿದೆ. ತರಬೇತಿ ಪಡೆಯುತ್ತಿರುವ ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ತಿಳಿಸಿದರು.


ಅಕ್ಬರ್ ಕುರ್ತಕೋಟಿ ಸಂಸ್ಥೆಯ ಅಧ್ಯಕ್ಷರಾದ ಫರೀದಾ ಎಸ್. ಬೆಟಗೇರಿ ಮಾತನಾಡಿದರು.
ಅಸ್ಮಾಬಾನು ಎಚ್ ಶೇಖ್, ಮೊಹಮ್ಮದ್ ರಫೀಕ್ ಚಾಂದಖಾನವರ್, ಸಾಹಿತಿ ಮಹಮ್ಮದ ಅಲಿ ಗೂಡುಭಾಯಿ ಫರೀನ್ ಎಂ. ಕಲೇಗಾರ್ ಉಪಸ್ಥಿತರಿದ್ದರು.