
ತೆಹ್ರಾನ್,ಏ.೭- ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಠಿಣ ಎಚ್ಚರಿಕೆ ಹಿನ್ನೆಲೆ ಇರಾನ್‌ನಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ. ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಸಂಭವಿಸಬಹುದೆಂಬ ಭೀತಿಯ ನಡುವೆ, ಇರಾನ್ ಸರ್ಕಾರ ತನ್ನ ನಾಗರಿಕರಿಗೆ ವಿದ್ಯುತ್ ಸ್ಥಾವರಗಳ ಬಳಿ ಮಾನವ ಸರಪಳಿ ನಿರ್ಮಿಸಲು ಕರೆ ನೀಡಿದೆ.
ಇರಾನ್ ಯುವಜನತೆ ಮತ್ತು ಕ್ರೀಡಾ ಉಪ ಸಚಿವ ಅಲಿರಿಜಾ ರೆಹಮಾನಿ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಣೆ ನೀಡಿ, “ಸಾರ್ವಜನಿಕ ಮೂಲಸೌಕರ್ಯಗಳ ಮೇಲೆ ದಾಳಿ ಯುದ್ಧ ಅಪರಾಧವಾಗಿದೆ ಎಂಬ ಸಂದೇಶವನ್ನು ಜಗತ್ತಿಗೆ ತಿಳಿಸಲು ನಾವು ಕೈ ಹಿಡಿದು ನಿಲ್ಲುತ್ತೇವೆ” ಎಂದು ತಿಳಿಸಿದ್ದಾರೆ.
“ಇರಾನ್‌ನ ಯುವ ಮಾನವ ಸರಪಳಿ ಪ್ರಕಾಶಮಾನ ಭವಿಷ್ಯಕ್ಕಾಗಿ” ಎಂಬ ಶೀರ್ಷಿಕೆಯಲ್ಲಿ ಏ ೭ರಂದು ದೇಶದ ವಿವಿಧ ವಿದ್ಯುತ್ ಸ್ಥಾವರಗಳ ಬಳಿ ಯುವಕರು, ಕಲಾವಿದರು ಮತ್ತು ಕ್ರೀಡಾಪಟುಗಳು ಭಾಗವಹಿಸುವ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ದೇಶದ ಸೈನಿಕ ಕ್ರಮಗಳಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶವೂ ಇದೆ ಎಂದು ವರದಿಗಳು ತಿಳಿಸಿವೆ.
ಇದಕ್ಕೆ ಮುನ್ನ, ಡೋನಾಲ್ಡ್ ಟ್ರಂಪ್ ಅವರು ಇರಾನ್‌ಗೆ ಒಂದು ದಿನದಲ್ಲಿ ಇರಾನ್ ಸರ್ವನಾಶವಾಗಬಹುದು ಎಂದು ಎಚ್ಚರಿಕೆ ನೀಡಿದ್ದರು. ಹಾರ್ಮುಜ್ ಜಲಸಂಧಿ ಸಂಪೂರ್ಣವಾಗಿ ಕಾರ್ಯನಿರ್ವಹಣೆಗೆ ಬರದಿದ್ದರೆ, ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ‘ಟ್ರೂತ್ ಸೋಶಿಯಲ್’ನಲ್ಲಿ ತೀವ್ರ ಶೈಲಿಯಲ್ಲಿ ಈ ಬೆದರಿಕೆ ಹಾಕಿದ್ದರು.
ಇದರಿಂದ ಉಭಯ ದೇಶಗಳ ನಡುವಿನ ತಣಾವಣೆ ಮತ್ತಷ್ಟು ಹೆಚ್ಚಳವಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದದ ಸಾಧ್ಯತೆ ಕಂಡುಬಂದರೆ ದಾಳಿ ಮುಂದೂಡಲಾಗಬಹುದು ಎನ್ನಲಾಗಿದೆ. ಅಂತಿಮ ನಿರ್ಧಾರವು ಅಧ್ಯಕ್ಷ ಆoಟಿಚಿಟಜ ಖಿಡಿumಠಿ ಅವರ ಕೈಯಲ್ಲೇ ಇರುವುದಾಗಿ ಅಮೆರಿಕದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿದ್ದಂತೆ, ಇರಾನ್ ಸರ್ಕಾರ ನಾಗರಿಕರನ್ನು ವಿದ್ಯುತ್ ಸ್ಥಾವರಗಳ ರಕ್ಷಣೆಗೆ ಮಾನವ ಸರಪಳಿಗಳ ಮೂಲಕ ಒಗ್ಗೂಡಿಸಲು ಮುಂದಾಗಿದೆ.
ಕೋಮ ಸ್ಥಿತಿಯಲ್ಲಿ ಮೊಜ್ತಬಾ
ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಬಾ ಖಾಮೆನೇಯಿ ಗಂಭೀರವಾಗಿ ಗಾಯಗೊಂಡು ಅಚೇತನ ಸ್ಥಿತಿಯಲ್ಲಿ ಕೋಮ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ‘ಟೈಮ್ಸ್’ ವರದಿ ತಿಳಿಸಿದೆ.
ಅಮೆರಿಕ- ಇಸ್ರೇಲ್ ಗುಪ್ತಚರ ಮೂಲಗಳು ಗಲ್ಫ್ ಮಿತ್ರ ರಾಷ್ಟ್ರಗಳಿಗೆ ಹಂಚಿಕೊಂಡಿದ್ದ ರಾಜತಾಂತ್ರಿಕ ಮೆಮೊವನ್ನು ಉಲ್ಲೇಖಿಸಿ, ಫೆಬ್ರವರಿ ೨೮ರಂದು ನಡೆದ ವೈಮಾನಿಕ ದಾಳಿಯಲ್ಲಿ ಖಾಮೆನೇಯಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಇದೇ ದಾಳಿಯಲ್ಲಿ ಅವರ ತಂದೆ, ಇರಾನ್‌ನ ಹಳೆಯ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಾಮೆನೇಯಿ ಮೃತಪಟ್ಟಿದ್ದರು ಎಂದು ವರದಿ ಹೇಳಿದೆ.
‘ಮೊಜ್ತಬಾ ಖಾಮೆನೇಯಿ ಗಂಭೀರ ಸ್ಥಿತಿಯಲ್ಲಿ ಕೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಡಳಿತದ ಯಾವುದೇ ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ,” ಎಂದು ಮೆಮೊದಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದಾಗಿ, ಅವರು ಅಧಿಕಾರ ಸ್ವೀಕರಿಸಿದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಕೆಲವೊಂದು ವದಂತಿಗಳು ಅವರು ದಾಳಿಯಲ್ಲೇ ಮೃತಪಟ್ಟಿದ್ದಾರೆ ಎಂಬುದನ್ನೂ ಸೂಚಿಸಿದ್ದವು.
ಆದರೆ, ಇರಾನ್ ಸರ್ಕಾರದ ಅಧಿಕಾರಿಗಳು ಖಾಮೆನೇಯಿ ಜೀವಂತವಾಗಿದ್ದು, ದೇಶದ ನಿರ್ಧಾರಗಳಲ್ಲಿ ಪಾತ್ರವಹಿಸುತ್ತಿದ್ದಾರೆ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ರಾಜ್ಯ ಮಾಧ್ಯಮಗಳಲ್ಲಿ ಅವರ ಹೆಸರಿನಲ್ಲಿ ಎರಡು ಹೇಳಿಕೆಗಳನ್ನು ಪ್ರಸಾರ ಮಾಡಲಾಗಿದೆ.
ಇದಲ್ಲದೆ, ಖಾಮೆನೇಯಿ ಯುದ್ಧ ಕೊಠಡಿಗೆ ಪ್ರವೇಶಿಸಿ ಇಸ್ರೇಲ್‌ನ ಡಿಮೋನಾ ಅಣು ವಿದ್ಯುತ್ ಘಟಕದ ನಕ್ಷೆಯನ್ನು ವಿಶ್ಲೇಷಿಸುತ್ತಿರುವ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದೆ.
ಇದೀಗ, ಕೋಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಹೊರಬಂದ ಮಾಹಿತಿಯಿಂದ ಇರಾನ್‌ನ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗಳು ಹುಟ್ಟಿಕೊಂಡಿವೆ.























