
ಕಲಬುರಗಿ,ಜ.8-ಮನೆ ಬೀಗ ಮುರಿದು 4.32 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಕಪನೂರ ಗ್ರಾಮದಲ್ಲಿ ನಡೆದಿದೆ.
ಶರಣಬಸಪ್ಪ ಸಿದ್ದಪ್ಪ ಜಗತಿ ಎಂಬುವವರ ಮನೆ ಬೀಗ ಮುರಿದು ಕಳ್ಳರು 40 ಗ್ರಾಂ.ಬಂಗಾರದ ಬಳೆ, 20 ಗ್ರಾಂ.ತಾಳಿ ಚೈನ್, ತಲಾ 5 ಗ್ರಾಂ.ಬಂಗಾರದ 2 ಸುತ್ತುಂಗುರ ಸೇರಿ 70 ಗ್ರಾಂ.ಚಿನ್ನಾಭರಣ ಮತ್ತು 12 ಸಾವಿರ ರೂ.ನಗದು ಸೇರಿ 4.32 ಲಕ್ಷ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.
ಶರಣಬಸಪ್ಪ ಜಗತಿ ಅವರು ತಮ್ಮ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಲೆಂದು ಮನೆಗೆ ಬೀಗ ಹಾಕಿಕೊಂಡು ಪತ್ನಿ, ಮಕ್ಕಳು ಮತ್ತು ಸೊಸೆಯೊಂದಿಗೆ ಬೆಂಗಳೂರಿಗೆ ಹೋಗಿದ್ದಾಗ ಕಳ್ಳರು ಮನೆ ಬೀಗ ಮುರಿದು ನಗನಾಣ್ಯ ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

























