
ಕೊಲ್ಹಾರ:ಫೆ.16:ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳು ಗುರುವಿನ ಮಾರ್ಗದರ್ಶನದೊಂದಿಗೆ ಗುರಿ ತಲುಪಲು ಪ್ರಯತ್ನಿಸಿದಲ್ಲಿ ಯಶಸ್ಸು ಸಿಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಲ್ ಹಾಜ್ ಡಾ.ಬಕ್ತೀಯಾರಖಾನ್ ಪಠಾಣ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸನ್ ಶೈನ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಕರನ್ನು ಪೂಜನೀಯ ಭಾವದಿಂದ ಕಾಣಬೇಕು, ಆಧುನಿಕ ಜೀವನ ಪದ್ಧತಿಯು ಗುರು ಹಾಗೂ ಶಿಷ್ಯರ ನಡುವಿನ ಬಾಂಧವ್ಯವನ್ನು ಸಂಕೀರ್ಣಗೊಳಿಸಿದೆ ಈ ಸಂಕೀರ್ಣತೆಯ ನಡುವೆಯೂ ಕೂಡ ಮಧುರ ಬಾಂಧವ್ಯ ನೆಲೆ ನಿಂತು ವಿದ್ಯಾರ್ಥಿಗಳು ಸಾಧನೆಯ ಶಿಖರವನ್ನು ಏರಬೇಕು ಎಂದರು.
ಶೀಲವಂತ ಮಠದ ಡಾ.ಕೈಲಾಸನಾಥ ಶ್ರೀಗಳು ಮಾತನಾಡಿ ಗುರುವೆಂದರೆ ಸಾಧನೆಗೆ ಪ್ರೇರಣೆ ನೀಡುವ ಮಂತ್ರವಿದ್ದಂತೆ, ವಿದ್ಯಾರ್ಥಿಗಳು ಗುರುವನ್ನು ಅನುಸರಿಸಿದರೆ ಗುರಿಯನ್ನು ಸುಲಭವಾಗಿ ಪಡೆಯಬಹುದು ಎಂದರು.
ಹಿರಿಯರಾದ ಸಿ.ಎಂ ಗಣಕುಮಾರ ಮಾತನಾಡಿ ಕೊಲ್ಹಾರ ಪಟ್ಟಣದಲ್ಲಿ ಪ್ರಾರಂಭವಾದ ಸನ್ ಶೈನ್ ಶಾಲೆಯು ಉತ್ತರೋತ್ತರವಾಗಿ ಬೆಳೆದು ಹೆಮ್ಮರವಾಗಲಿ ಎಂದು ಹಾರೈಸಿದರು.
ಬಾಬುಸಾಬ ಬಿಜಾಪುರ, ಎಸ್.ಬಿ ಪತಂಗಿ, ಸಲೀಂ ಅತ್ತಾರ ಸಹಿತ ಇನ್ನಿತರರು ಮಾತನಾಡಿದರು.
ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.
ವೇದಿಕೆಯ ಮೇಲೆ ಅಲ್ಹಾಜ್ ಐ.ಎನ್ ತಹಸಿಲ್ದಾರ್, ಹಸನಡೋಂಗ್ರಿ ಗಿರಗಾವಿ, ಸಲೀಂ ಡಾಂಗೆ, ಬಾಷಾಸಾಬ ಶಿರೂರ, ಮೈನು ಮನ್ನಾಬಾಯಿ ಸಹಿತ ಇನ್ನಿತರರು ಇದ್ದರು




























