
ಕಲಬುರಗಿ,ಡಿ.18-ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಪರ್ಸ್‍ನಲ್ಲಿ ಇದ್ದ 6.80 ಲಕ್ಷ ರೂ.ಚಿನ್ನಾಭರಣ ಕಳವಾಗಿರುವ ಘಟನೆ ನಡೆದಿದೆ.
ನಗರದ ಚಿಮ್ಮಲಗಿ ಲೇಔಟ್ ನಿವಾಸಿ ಉಮಾದೇವಿ ನಾಯಿಕೋಡಿ ಅವರು ಭಂಕೂರ ಗ್ರಾಮದಲ್ಲಿ ಸಂಬಂಧಿಕರ ತೊಟ್ಟಿಲು ಕಾರ್ಯಕ್ರಮ ಇದ್ದ ಪ್ರಯುಕ್ತ ನಗರದ ಧನ್ವಂತರಿ ಆಸ್ಪತ್ರೆಯ ಹತ್ತಿರವಿರುವ ಬಸ್ ನಿಲ್ಲಾಣದಲ್ಲಿ ಶಹಾಬಾದಗೆ ಹೋಗುವ ಬಸ್ ಹತ್ತಿದ್ದಾರೆ. ಬಸ್ ನಂದೂರ್ ಇಂಡಸ್ಟ್ರಿಯಲ್ ಹತ್ತಿರ ಹೋದಾಗ ಬ್ಯಾಗ್ ಕೆಳಗಡೆ ಬಿದ್ದಿದ್ದು, ಈ ವೇಳೆ ಬ್ಯಾಗಿನೊಳಗಡೆ ಪರ್ಸ್‍ನಲ್ಲಿ ಇಟ್ಟಿದ್ದ 3.20 ಲಕ್ಷ ರೂ.ಮೌಲ್ಯದ 20 ಗ್ರಾಂ.ಬಂಗಾರದ ಎರಡು ಬಳೆಗಳು, 2.40 ಲಕ್ಷ ರೂ.ಮೌಲ್ಯದ 30 ಗ್ರಾಂ.ಬಂಗಾರದ ಮಂಗಲಸೂತ್ರ, 80 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ನಾನ್, 40 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ ಒಂದು ಜೊತೆ ಜುಮಕಿ ಸೇರಿ 6.80 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ. ಈ ಸಂಬಂಧ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
























