ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ: ಸಚಿವ ದರ್ಶನಾಪುರ

ಜೇವರ್ಗಿ:ಜು.೧: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನವರು ಸಮಾಜಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ನಮ್ಮ ಸಮಾಜದವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣಕ್ಕೆ ಕೊರತೆ ಆಗದಂತೆ ಸಮಾಜದವರು ನೋಡಿಕೊಳ್ಳುವುದು ಅಗತ್ಯವಿದೆ. ಬೇರೆ ಸಮಾಜದ ಕಷ್ಟಕ್ಕೆ ಸ್ಪಂದಿಸಿ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಅಭಿಮತಪಟ್ಟರು.
ಪಟ್ಟಣದ ಭೂತಪೂರ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಹಾಗೂ ನೂತನ ತಾಲೂಕಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿದ ಅವರು, ಸಮಾಜ ಸಂಘಟನೆ ಮಾಡಬೇಕಾದರೆ ಮೊದಲು ಸಮಾಜ ಶಿಕ್ಷಣವಂತರಾಗಬೇಕು. ಜೇವರ್ಗಿ ಯಡ್ರಾಮಿ ತಾಲೂಕಿನಲ್ಲಿ ರೆಡ್ಡಿ ಸಮಾಜದ ಸಮುದಾಯ ಭವನಕ್ಕೆ ಸೂಕ್ತ ಸ್ಥಳ ಇದ್ದರೆ ಸಮುದಾಯ ಭವನ ನಿರ್ಮಾಣಕ್ಕೆ ನಮ್ಮ ಸಹಕಾರಹಾಗೂ ಸರಕಾರದಿಂದ ಸಹಾಯ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹೆಡಗಿಮದ್ರಾದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ರೆಡ್ಡಿ ಸಮಾಜದ ಜಿಲ್ಲಾಧ್ಯಕ್ಷ ಡಾ. ಶರಣಬಸಪ್ಪ ಕಾಮರೆಡ್ಡಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಶಿವಲಾಲಸಿಂಗ್, ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರೆಡ್ಡಿ ಸಮಾಜದ ತಾಲೂಕಾ ಅಧ್ಯಕ್ಷ ಶಿವರೆಡ್ಡಿ ಐನಾಪೂರ ಹಾಲಗಡ್ಲಾ, ಬಾಪುಗೌಡ ಪೊಲೀಸ ಪಾಟೀಲ, ಸಿದ್ದಣ್ಣಗೌಡ ಲಕಣಾಪೂರ, ಶರಣಗೌಡ ಪೊಲೀಸ ಪಾಟೀಲ, ಸಿದ್ದಾರೆಡ್ಡಿ, ಭೀಮರೆಡ್ಡಿ ಕುರಾಳ, ಅರುಣರೆಡ್ಡಿ ಶಿವಪೂರ, ಸಿದ್ದು ಸಾಹೂ ಅಂಗಡಿ, ಗೌಡಪ್ಪಗೌಡ ಅಂಬರಖೇಡ, ಮಲ್ಲಣ್ಣಗೌಡ ಪಾಟೀಲ ನೇರಡಗಿ, ಅಂಬರೇಶ ಶಕಾಪುರ, ಬಾಪುರೆಡ್ಡಿ ಮಲ್ಲಾ ಬಿ. ರಾಮರೆಡ್ಡಿ ಬಿಳವಾರ, ಶೇಖರಗೌಡ ಹಾಲಗಡ್ಲಾ, ಪರವತರಡ್ಡಿ ಹಾಲಗಸ್ಲಾ, ಮಲ್ಲಣ್ಣಗೌಡ ಕೋಡªÄನಹಳ್ಳಿ, ಸೇರಿದಂತೆ ರೆಡ್ಡಿ ಸಮಾಜದ ಮುಖಂಡರು ಯುವಕರು ಮಹಿಳೆಯರು ಇದ್ದರು. ಅರುಣರೆಡ್ಡಿ ಶಿವಪೂರ ನಿರೂಪಿಸಿದರು.
ರೆಡ್ಡಿ ಸಮಾಜವನ್ನು ಎಲ್ಲ ಜನರು ಗೌರವಿಸುತ್ತಾರೆ, ಅವರ ಮಾತನ್ನು ಒಪ್ಪುತ್ತಾರೆ. ಏಕೆಂದರೆ ಮಾತು ತಪ್ಪದೆ ನಡೆಯುತ್ತಾರೆ, ಮಾತಿಗಾಗಿ ಜೀವ ಬೇಕಾದರೂ ಬಿಡುತ್ತಾರೆ. ಆದರೆ ಮಾತು ತಪ್ಪುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತು. ನಮ್ಮ ಯುವಕರು ಉತ್ತಮ ಸಂಸ್ಕಾರದ ಜತೆಗೆ ಶಿಕ್ಷಣಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.
ಜೇವರ್ಗಿ ಭೂತಪೂರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಗಿದ್ದ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನವರ ಜಯಂತ್ಯುತ್ಸವ ಹಾಗೂ ಜಯಂತ್ಯುತ್ಸವ ಹಾಗೂ ನೂತನ ತಾಲೂಕಾಧ್ಯಕ್ಷರ ಪದಗ್ರಹಣ ತಾಲೂಕು ಅಧ್ಯಕ್ಷ ಶಿವರೆಡ್ಡಿ ಐನಾಪೂರ ಅವರನ್ನು ಸನ್ಮಾನಿಸಲಾಯಿತು.