
ಕಲಬುರಗಿ,ಡಿ.15-ತಾಲ್ಲೂಕಿನ ಸಿಂದಗಿ (ಬಿ) ಗ್ರಾಮದ ಹತ್ತಿರವಿರುವ ನಿರ್ಮಲಾಬಾಯಿ ಮಾಲಿಪಾಟೀಲ ಅವರ ಹೊಲದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಶಿವುಕುಮಾರ, ಅಶೋಕ ಕಟಕೆ ಮತ್ತು ನಾಗರಾಜ ಅವರು ದಾಳಿ ನಡೆಸಿ 8 ಜನರನ್ನು ಬಂಧಿಸಿದ್ದಾರೆ.
ರೇವಣಸಿದ್ದಪ್ಪ ಆವಂಟಗಿ, ಶರಣಬಸಪ್ಪ ಮಾಲಿಪಾಟೀಲ, ವಿಶಾಲ ಗೌಳಿ, ಶಿವಾನಂದ ಬಿರಾದಾರ, ಈಶ್ವರಾಜ ಆವಂಟಗಿ, ಅಣವೀರಪ್ಪ ಮಾಲಿಪಾಟೀಲ, ವಿರೇಶ ಆವಂಟಗಿ ಮತ್ತು ಆನಂದ ಜಮದಾರಖಾನಿ ಎಂಬುವವರನ್ನು ಬಂಧಿಸಿ 20,500 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ. ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























