ಜೂಜಾಟ: 14 ಮಂದಿ ಬಂಧನ

ಕಲಬುರಗಿ,ಜ.8-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದ ಕೊರೆಮ್ಮಾ ದೇವಸ್ಥಾನ ಪಕ್ಕದ ಸಾರ್ವಜನಿಕ ಸ್ಥಳ ಮತ್ತು ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅವರಾದ (ಬಿ) ಗ್ರಾಮದಲ್ಲಿ ಜೂಜಾಟವಾಡುತ್ತಿದ್ದ 14 ಜನರನ್ನು ವಿಶ್ವವಿದ್ಯಾಲಯ ಮತ್ತು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.
ನಾಗನಹಳ್ಳಿ ಗ್ರಾಮದ ಕೊರೆಮ್ಮ ದೇವಸ್ಥಾನ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್, ಸಿಬ್ಬಂದಿಗಳಾದ ಈರಣ್ಣಾ, ಜೈಭೀಮ್, ಶಿವಶರಣಪ್ಪ, ವಿಠ್ಠಲ ಮತ್ತು ಭೋಗೇಶ್ ಅವರು ದಾಳಿ ನಡೆಸಿ ಈರಣ್ಣಾ ಪಟ್ಟಣ, ರಾಜಕುಮಾರ ನಾಗನಹಳ್ಳಿ, ಸೂರ್ಯಕಾಂತ ನಡುವಿನಮನೆ, ಶಾಂತಕುಮಾರ ಬಿರಾದಾರ, ರೇವಣಸಿದ್ದಪ್ಪ ಸಾವಳಗಿ, ಶಿವರಾಜ ದಿವಟಗಿ ಮತ್ತು ಸಿದ್ರಾಮಪ್ಪ ಸಿಂಪಿ ಎಂಬುವವರನ್ನು ಬಂಧಿಸಿ 12,100 ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ಇನ್ನು ಸಬ್-ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅವರಾದ (ಬಿ) ಗ್ರಾಮದ ಬಸ್‍ಸ್ಟ್ಯಾಂಡ್ ಹತ್ತಿರವಿರುವ ಅಂಬಾರಾಯ ಹರಸೂರ ಅವರ ಅಂಗಡಿ ಪಕ್ಕದ ಖುಲ್ಲಾ ಜಾಗದಲ್ಲಿ ಜೂಜಾಟವಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ಅರುಣಕುಮಾರ, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಶಿವಲಿಂಗ, ಅಶೋಕ ಕಟಕೆ, ಶಿವಕುಮಾರ, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ ದಶರಥ ಕಾಂಬಳೆ, ರಾಚಯ್ಯ ಮಠಪತಿ, ರಾಜಕುಮಾರ ಕಾಂಬಳೆ, ಸತೀಶ್ ತಿವಾರಿ, ಆರೀಫ್ ಮಿಯ್ಯಾ, ಶಿವಶರಣಪ್ಪ ಸಾಗರ, ವೀರಣ್ಣಾ ಸಂಗಾಣಿ ಎಂಬುವವರನ್ನು ಬಂಧಿಸಿ 5 ಸಾವಿರ ರೂ.ನಗದು, 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿದ್ದಾರೆ.
ವಿಶ್ವವಿದ್ಯಾಲಯ ಮತ್ತು ಸಬ್-ಅರ್ಬನ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.