Home ಜಿಲ್ಲೆ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಉಚಿತ ನೇತ್ರ ಚಿಕಿತ್ಸಾ ಶಿಬಿರ

ಲಕ್ಷೆ÷್ಮÃಶ್ವರ, ಆ೮: ಪಟ್ಟಣದ ನರ್ಸಿಂಗ್ ಹೋಂನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.


ಶಿಬಿರವನ್ನು ಸಸಿಗೆ ನೀರೆರೆಯುವ ಉದ್ಘಾಟಿಸಿ ಮಾತನಾಡಿದ ಡಾಕ್ಟರ ಪಿ ಡಿ ತೋಟದ ಅವರು ಇಂದು ಯುವ ಪೀಳಿಗೆ ಹಿರಿಯರನ್ನು ಗೌರವದಿಂದ ಕಾಣುತ್ತಿಲ್ಲ ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅತ್ಯವಶ್ಯ ಆದರೆ ಹಿರಿಯರು ಅನಾರೋಗ್ಯದಿಂದ ಇನ್ನಿತರೆ ಕಾಯಿಲೆಗಳಿಂದ ಬಳಲುತ್ತಿರುವಾಗ ಅವರಿಗೆ ಸಂಘ ಸಂಸ್ಥೆಗಳು ಸಾಮಾಜಿಕ ಸಂಘಟನೆಗಳು ನೆರವಿಗೆ ಧಾವಿಸಿದರೆ ಅವರು ಇನ್ನೂ ಹೆಚ್ಚು ಆರೋಗ್ಯವಂತರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ.


ಈ ನಿಟ್ಟಿನಲ್ಲಿ ಪಟ್ಟಣದ ಹಿರಿಯ ನಾಗರಿಕರ ವೇದಿಕೆ ಮತ್ತು ತಾಲೂಕ ವೈದ್ಯರ ಸಂಘ ನಿವೃತ್ತ ನೌಕರರ ಸಂಘ ಹಾಗೂ ಮತ್ತಿತರ ಸಂಘಟನೆಗಳು ಕೈ ಜೋಡಿಸಿದ್ದರಿಂದ ಇಂದು ಸುಮಾರು ೭೫ ಹೆಚ್ಚು ಹಿರಿಯರ ನೇತ್ರ ತಪಾಸಣೆ ಮತ್ತು ಅದರಲ್ಲಿ ೨೫ ಜನರಿಗೆ ಶಸ್ತç ಚಿಕಿತ್ಸೆ ಮಾಡಲು ಹುಬ್ಬಳ್ಳಿಯ ಎಂಎA ಜೋಶಿ ನೇತ್ರ ವಿಜ್ಞಾನ ಸಂಸ್ಥೆಯವರು ಕೈಜೋಡಿಸಿದ್ದು ಅತ್ಯಂತ ಹೆಮ್ಮೆ ಎಂದು ಹೇಳಿದರು.


ಹಿರಿಯ ನಾಗರಿಕ ವೇದಿಕೆಯ ಸಿ ಆರ್ ಲಕ್ಕುಂಡಿ ಮಠ ಮತ್ತು ಚಂಬಣ್ಣ ಬಾಳಿಕಾಯಿಯವರು ಮಾತನಾಡಿ ಸರ್ಕಾರ ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ೬೦ ವರ್ಷ ಮೇಲ್ಪಟ್ಟವರು ಈ ವೇದಿಕೆಯನ್ನು ಸೇರ್ಪಡೆಯಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರಲ್ಲ ದೆ ಜ್ಯೋತಿ ನರ್ಸಿಂಗ್ ಹೋಮ್ ನವರು ಪ್ರತಿ ತಿಂಗಳು ಒಂದು ಆರೋಗ್ಯ ಶಿಬಿರವನ್ನು ಏರ್ಪಡಿಸಿದರೆ ಅದಕ್ಕೆ ತಾವು ಕೈಜೋಡಿಸುವದಾಗಿ ಹೇಳಿದರು.


ಕಾರ್ಯಕ್ರಮದಲ್ಲಿ ಡಾ. ಶಿವಾನಂದ್ ಹೂವಿನ ಡಾಕ್ಟರ್ ಪ್ರಸನ್ ಕುಲಕರ್ಣಿ ಎಲ್ ಆರ್ ಮಲಸಮುದ್ರ ಎಂಕೆ ಕಳ್ಳಿಮಠ ಐ. ಎಸ್ ಮಡಿವಾಳರ ನೀಲಪ್ಪ ಕರ್ಜಕ್ಕಣ್ಣವರ ಸೇರಿದಂತೆ ಅನೇಕರಿದ್ದರು.
ಶಿಬಿರದಲ್ಲಿ ಹುಬ್ಬಳ್ಳಿಯ ಎಂಎA ಜೋಷಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.