
ಸಂಜೆವಾಣಿ ವಾರ್ತ
ಹುಮನಾಬಾದ್:ಜ.೧೧: ಕಲ್ಯಾಣ ಕರ್ನಾಟಕದ ಐತಿಹಾಸಿಕ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಿದ್ಧತಾ ಸಭೆ ಪೊಲೀಸರ ಸರ್ಪಗಾವಲಿನಲ್ಲಿ ಜರುಗಿತು.ಪೊಲೀಸರ ಸರ್ಪಗಾವಿನಲ್ಲಿ ಇಲ್ಲಿಯ ಬಸವರಾಜ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಜರುಗಿತು. ಹಿರೇಮಠದ ರೇಣುಕಾ ಗಂಗಾಧರ ಶಿವಾಚಾರ್ಯ ದಿವ್ಯ ಸಾನಿಧ್ಯದಲ್ಲಿ ಸಭೆಯು ಜರಗಿತು. ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಈ ಸಭೆಯಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಜಾತ್ರಾ ಮಹೋತ್ಸವ ಅತಿ ಯಶಸ್ವಿಯಾಗಿ ಅದ್ದೂರಿಯಾಗಿ ಆಚರಿಸಲು ತಮ್ಮ ಸಲಹೆ ನೀಡಿದರು. ಜಾತ್ರೆಗೆ ಬರುವ ಭಕ್ತಾರಿಗೆ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದAತೆ ,ಸಕಲಸಿದ್ಧತೆ ಒದಗಿಸಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ತಮ್ಮ ಸಲಹೆ ನೀಡಿದರು. ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳು ಈ ಪೂರ್ವಭಾವಿ ಸಿದ್ಧತೆಯಲ್ಲಿ ಪಾಲ್ಗೊಂಡಿದ್ದಕ್ಕೆ ಜಿಲ್ಲಾಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ ಸರ್ವಧರ್ಮದ ಜನತೆಯ ಆರಾಧ್ಯ ದೇವರಾದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪರಂಪರೆಯAತೆ ಸಂಪ್ರದಾಯದAತೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಅದ್ದೂರಿಯಾಗಿ ಆಚರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಸವರಾಜ ಆರ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಲ್ಲಿಕಾ ರ್ಜುನ ಮಾಳಶೆಟ್ಟಿ ಮಾತನಾಡಿದರು. ಸಹಾಯಕ ಆಯುಕ್ತ ಪ್ರಕಾಶ ಕುದರೆ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್, ಸುನೀಲ (ಕಾಳಪ್ಪ) ಪಾಟೀಲ್, ಭದ್ರೇಶ ಪಾಟೀಲ್, ತಹಸೀಲ್ದಾರ ಅಂಜುಮ್ ತಬಸ್ಸುಮ್, ಮಂಜುನಾಥ ಪಂಚಾಳ, ಪುರಸಭೆ ಮುಖ್ಯಾಧಿಕಾರಿ ವನಿತಾ ಬಾಯಿ, ಮಹೇಶ ಅಗಡಿ, ದತ್ತಕುಮಾರ ಚಿದ್ರಿ, ವೆಂಕಟೇಶ ಕುಲ್ಕರ್ಣಿ, ಅಪ್ಪರಮಿಯ್ಯ, ಸೇರಿದಂತೆ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು, ಭಕ್ತರು ಇದ್ದರು.
ಹೆಚ್ಚುವರಿ ಎಸ್.ಪಿ. ಚಂದ್ರಕಾAತ ಪೂಜಾರಿ, ಡಿವೈಎಸ್ಪಿ ಮಡೋಳಪ್ಪ, ಸಿಪಿಐ ಅಮೂಲ ಕಾಳೆ, ಶ್ರೀನಿವಾಸ ಅಲ್ಲಾಪೂರೆ, ಅಲಿಸಾಬ್, ಪಿಎಸ್‌ಐ ಸುರೇಶಕುಮಾರ, ಬಸಲಿಂಗಪ್ಪ ಇದ್ದರು. ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು.

























