
ಚನ್ನಮ್ಮನ ಕಿತ್ತೂರು,ಮಾ 15: ಮಕ್ಕಳು ತಂದೆ ತಾಯಿಯ ಮಾತು ಕೇಳದೆ ಅಂಜದೆ ಮನಬಂದಂತೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿ, ನೀಡದೇ ಇರುವುದು ಎಂದು ಬಿಳಿಕಿ- ಅವರೊಳ್ಳಿ ರುದ್ರಸ್ವಾಮಿಮಠದ ಚನ್ನಬಸವದೇವರು ತಿಳಿಸಿದರು.
ಸಮೀಪದ ಹೊಸ ಲಿಂಗನಮಠ ಗ್ರಾಮದ ಹುಲಿಗೆಮ್ಮಾ ದೇವಿಯ ನೂತನ ಶಿಲಾವಿಗ್ರಹ ಪ್ರತಿಷ್ಠಾಪನೆ, ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಮೊಬೈಲ್ ಬಳಕೆ ಸಂಪೂರ್ಣ ವಿದ್ಯಾರ್ಥಿಗಳು ನಿಷೇಧಿಸಬೇಕು. ಮನೆಯಲ್ಲಿ ತಂದೆ ತಾಯಿಯ. ಮಾತುಗಳು ಕೇಳಿ ಮುಂದೆ ಗುರಿ ಹಿಂದೆ ಗುರು ಇರಬೇಕು ಅಂದರೆ ಮಾತ್ರ ಜೀವನದಲ್ಲಿ ಏನು ಬೇಕಾದರೂ ಆಗಬಹುದು ಎಂದರು.
ಶಿವಾ ಬಾಗವಾಡಕರ ಮಾತನಾಡಿ ಹೊಸ ಲಿಂಗನಮಠ ಗ್ರಾಮದಲ್ಲಿ ನೂತನ ಹುಲಿಗೆಮ್ಮ ದೇವಿಯ ದೇವಸ್ಥಾನ ನಿರ್ಮಾಣವಾಗಬೇಕಾದರೆ ಈ ಗ್ರಾಮದ ಮಾತೆ ರತ್ನವ್ವಾ ಆನಂದ ಹುಲಗನ್ನವರ 20 ವರ್ಷದ ಸತತ ಪ್ರಯತ್ನ ಫಲವಾಗಿ ಇಂದು ಮಂದಿರ ನಿರ್ಮಾಣವಾಯಿತು.ದೇವಿಯ ಆರ್ಶೀವಾದದಿಂದ ಪ್ರತಿ ವರ್ಷವೂ ಈ ಜಾತ್ರೆಯು ಅದ್ದೂರಿಯಾಗಿ ನಡೆಯಲೆಂದರು.
ದಶರಥ ಬನೋಶಿ, ಶಿವಲಿಂಗಯ್ಯ ಅಲ್ಲಯ್ಯನವರಮಠ, ಪತ್ರಕರ್ತ ಕಿಶೋರ ಮಿಠಾರಿ. ವಿಠ್ಠಲ ಹಿಂಡಲಕರ,ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಗನಮಠ ಗ್ರಾಮದ ಬಸಯ್ಯಾ ಹಿರೇಮಠ, ಗ್ರಾಪಂ ಮಾಜಿ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ, ಪಾಂಡುರಂಗ ಮಿಟಗಾರ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಬೆಳಗಾವಿ ಮಂಜುಳಾ ಕಡಕೋಳ, ಲಿಂಗನಮಠ ಗ್ರಾಪಂ ಮಾಜಿ ಅಧ್ಯಕ್ಷೆ ರತ್ನವ್ವಾ ಮಾಟೊಳ್ಳಿ,ದೀಪಾ ಪಾಟೀಲ ಬೀಡಿ, ಸಮುದಾಯ ಆರೋಗ್ಯ ಕೇಂದ್ರ ಲಿಂಗನಮಠ ಅಧಿಕಾರಿ ಪೂನಂ ನಾಯ್ಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಬೀಡಿ ವಲಯದ ಮೇಲ್ವಿಚಾರಕರು ಮಂಜುನಾಥ ಎಚ್, ವಾಸ್ತು ತಜ್ಞ ಆನಂದ ಬೆಣಚಿಕರ, ಪಾಂಡುರಂಗ ಪಾಟೀಲ, ಅರುಣ ಬೆಳಗಾಂವಕರ, ಇತರರು ಇದ್ದರು.
ಗ್ರಾಪಂ ಅಧ್ಯಕ್ಷ ಕಾಶೀಮ ಹಟ್ಟಿಹೋಳಿ ಸ್ವಾಗತ, ಶಿಕ್ಷಕರು ಪುಂಡಲೀಕ ಸನ್ನರ ನಿರೂಪಿಸಿದರು, ಬಸವರಾಜ ತಳವಾರ ವಂದಿಸಿದರು.



























