ಸುಲಿಗೆ: ಆರೋಪಿಗಳಿಗೆ ಮೂರು ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ

ಕಲಬುರಗಿ,ಫೆ.19-2016ರಲ್ಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಮನಾಬಾದ ಸರ್ಕಲ್ ಸರ್ಕಲ್ ಬಳಿಯ ಟಿ.ವಿ.ಸ್ಟೇಷನ್ ಕ್ವಾಟರ್ಸ್ ಎದರುಗಡೆಯ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರನ್ನು ಆಟೋದಿಂದ ಅಡ್ಡಗಟ್ಟಿ ಅವರ ಬಳಿ ಇದ್ದ ಮೊಬೈಲ್ ಮತ್ತು 3,500 ರೂ.ನಗದು ದೋಚಿದ್ದ ಮೂವರು ಆರೋಪಿಗಳಿಗೆ 3 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ, ತಲಾ 10 ಸಾವಿರ ರೂ.ದಂಡ ವಿಧಿಸಿದೆ.
ಖಲೀಲ್ ತಂದೆ ಖಾಜಾ ಪಟೇಲ್, ಆಸೀಫ್ ತಂದೆ ಬಹಿಬೂಬ್, ಅವಿನಾಶ ತಂದೆ ಸುಭಾಷಚಂದ್ರ ಮಾಳಾ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ.
ಇವರು 2016ರಲ್ಲಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹುಮನಾಬಾದ ಸರ್ಕಲ್ ಸರ್ಕಲ್ ಬಳಿಯ ಟಿ.ವಿ.ಸ್ಟೇಷನ್ ಕ್ವಾಟರ್ಸ್ ಎದರುಗಡೆಯ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬನ್ನನು ಅಡ್ಡಗಟ್ಟಿ ಅವರ ಬಳಿ ಇದ್ದ ಮೊಬೈಲ್ ಮತ್ತು 3,500 ರೂ.ನಗದು ದೋಚಿದ್ದರು. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‍ಐ ಉದ್ದಂಡಪ್ಪ ಮಣ್ಣೂರಕರ್ ಹಾಗೂ ಸಿಪಿಐ ವಾಜೀದ್ ಪಟೇಲ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಭಾರಿ 5ನೇ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಲಲೀತಾ ಕುದರಿಮತಿ ಅವರು ಆರೋಪಿಗಳಿಗೆ ಮೂರು 3 ವರ್ಷ ಕಠಿಣ ಕಾರಾಗೃಹವಾಸ ಶಿಕ್ಷೆ, ತಲಾ 10 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಸಂತೋಷಕುಮಾರ ಲೋಖಂಡೆ ವಾದ ಮಂಡಿಸಿದ್ದರು.