
ಕಲಬುರಗಿ: ನಗರದ ಇಂಧಿರಾ ಸ್ಮಾರಕ ಭವನದಲ್ಲಿ ಕರೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಗೆ ಹಾಜರಾಗದ ಮೇಯರ ಮತ್ತು ಆಯುಕ್ತರ ನಡೆಯನ್ನು ಖಂಡಿಸಿ, ಪ್ರತಿಪಕ್ಷದ ನಾಯಕಿ ಶೋಭಾ ದೇಸಾಯಿ, ಬಿಜೆಪಿ ಪಾಲಿಕೆ ಸದಸ್ಯರಾದ ವಿಶಾಲ ದರ್ಗಿ, ವಿಜಯಕುಮಾರ ಸೇವಲಾನಿ, ಮಲ್ಲು ಉದನೂರ, ವೀರಣ್ಣ ಹೊನ್ನಳ್ಳಿ, ಪಾರ್ವತಿ ರಾಜು ದೇವದುರ್ಗ, ಸಚಿನ ಕಡಗಂಡಿ ಪ್ರತಿಭಟನೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದರು.




























