ಪದಾಧಿಕಾರಿಗಳ ಆಯ್ಕೆ

ಹುಬ್ಬಳ್ಳಿ, ಜೂ19: ಬೆಳಗಾವಿ ಪ್ರಾಂತೀಯ ಸಮಾಜ ಸೇವಾ ಸಂಸ್ಥೆ ಧಾರವಾಡ ಕೆ ಏನ್ ಹೆಚ್ ಜರ್ಮನಿ ಸಾತಿ ಯೋಜನೆಯಡಿಯಲ್ಲಿ ಹುಬ್ಬಳ್ಳಿ ತಾಲೂಕ ಮಟ್ಟದ ಸ್ಲಂ ಸಮಿತಿ ರಚನೆ ಹಾಗೂ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕ ಮಟ್ಟದ ಒಕ್ಕೂಟದ ಗೌರವ ಅಧ್ಯಕ್ಷರಾಗಿ ರಮೇಶ್ ಮಹಾದೇವಪ್ಪನವರ್, ಅಧ್ಯಕ್ಷರಾಗಿ ದೀಪ ಕಲ್ಲಣ್ಣವರ, ಉಪಾಧ್ಯಕ್ಷರಾಗಿ ಮಲ್ಲಿಕಾ .ಶೆಟ್ಟಿ, ಗೌರವ ಉಪಾಧ್ಯಕ್ಷರಾಗಿ ಕಲಂದರ್ ಮುಲ್ಲಾ, ಗೌರವ ಕಾರ್ಯದರ್ಶಿಗಳಾಗಿ ಸಂದೀಪ್ ದಾಯಿಗೋಡಿ, ಕಾರ್ಯದರ್ಶಿಗಳಾಗಿ ಶಾರದಾ ಚೌಹಾಣ್, ಸಹ ಕಾರ್ಯದರ್ಶಿಗಳಾಗಿ ಸುಜಾತ, ಖಜಾಂಚಿ ಆಗಿ ಸುಮಗನಾಚಾರಿ ಹಾಗೂ ಮಂಜುನಾಥ್ ಸಿ ಕೆ. ಒಟ್ಟು 9 ಜನರ ಕಾರ್ಯಕಾರಿ ಸಮಿತಿಯನ್ನು ರಚನೆ ಮಾಡಲಾಯಿತು.

ಸಾತಿ ಯೋಜನೆಯ ಸಂಯೋಜಕರಾದ ಅಬ್ದುಲ್ ಖಾನ್ ಪಟಾನ್ ತಾಲೂಕ ಮಟ್ಟದ ಬಗ್ಗೆ ಮಾತನಾಡಿದರು. ಕಲಿಕಾ ಕೇಂದ್ರದ ಶಿಕ್ಷಕರಾದ ಶ್ರೀಮತಿ ಜ್ಯೋತಿ ನಾಗಮಣಿ, ಶ್ವೇತಾ ಗಾಯತ್ರಿ ಹಾಗೂ ಶಿವಕುಮಾರ್ ಭಾಗವಹಿಸಿದ್ದರು.