ಡಾ. ಬಾಬು ಜಗಜೀವನ ರಾಮ ಭವನಕ್ಕೆ ಅನುದಾನ ನೀಡಲು ಮನವಿ

ಕಲಬುರಗಿ:ಜ.೧೧: ನಗರದಲ್ಲಿ ನಿರ್ಮಿಸುತ್ತಿರುವ ಬೃಹತ್ತ ಡಾ. ಬಾಬು ಜಗಜೀವನ ರಾಮ ಭವನಕ್ಕೆ ಹೆಚ್ಚುವರಿಯಾಗಿ ಅನುದಾನ ನೀಡಿ ಭವನ ಕಟ್ಟಡ ಪೂರ್ಣಗೊಳಿಸಲು ಜಿಲ್ಲಾ ಮಾದಿಗರ ಸಮಾಜದ ಅಭಿವೃದ್ಧಿ ಒಕ್ಕೂಟ ಸಮೀತಿಗೆ ಅನುಮತಿ ನೀಡಬೇಕೆಂದು ಕಲಬುರಗಿ ಜಿಲ್ಲಾ ಮಾದಿಗ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲಿಸಿದ್ದರು.
ಕಲಬುರಗಿ ನಗರದಲ್ಲಿ ನಿರ್ಮಿಸುತ್ತಿರುವ ಬೃಹತ್ತ ಡಾ. ಬಾಬು ಜಗಜೀವನ ರಾಮ ಭವನ ಸುಮಾರು ೧೦-೧೨ ವರ್ಷದ ಹಿಂದೆ ಕಟ್ಟಡ ಕಾಮಗಾರಿಯನ್ನು ಪ್ರಾರಂಭವಾಗಿದ್ದು, ಅಂದು ಕಟ್ಟಡ ಕಾಮಗಾರಿಗೆ ಅಂದಾಜು ವೆಚ್ಚ ೧೨.೫೦ ಕೋಟಿ ಮಂಜುರಾಗಿದ್ದು, ಅದರಲ್ಲಿ ಕೆಲವು ವರ್ಷಗಳ ಹಿಂದುಗಡೆ ಬರಿ ೮.೫೦ ಕೋಟಿ ಹಣ ಬಿಡುಗಡೆ ಮಾಡಿದ್ದು, ಇನ್ನುಳಿದ ಹಣ ಬಿಡುಗಡೆ ಮಾಡದೇ ಇರುವುದರಿಂದ ಹಲವಾರು ವರ್ಷದಿಂದ ಬೃಹತ್ತ ಭವನ ಕಟ್ಟಡ ಕಾಮಗಾರಿಯೂ ನೆನೆಗುದಿಗೆ ಬಿದ್ದಿರುತ್ತದೆ.
ಡಾ. ಬಾಬು ಜಗಜೀವನ ರಾಮ ಭವನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು. ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರು ದಿನಾಂಕ:೦೩-೦೪-೨೦೨೫ ರಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಇನ್ನೂ ೬.೫೦ ಕೋಟಿ ಕಟ್ಟಡ ಕಾಮಗಾರಿಗೆ ಅವಶ್ಯಕತೆ ಇದೆ ಎಂದು ಪ್ರಸ್ಥಾವನೆ ಕಳಿಸಿರುತ್ತಾರೆ. ಮಾನ್ಯ ಸಮಾಜ ಕಲ್ಯಾಣ ಅಧಿಕಾರಿಗಳು ದಿನಾಂಕ:೧೬-೦೪-೨೦೨೩ ರಂದು ಬೃಹತ್ತ ಭವನ ಕಟ್ಟಡಕ್ಕೆ ೬.೫೦ ಕೋಟಿ ರೂಪಾಯಿ ಮಂಜುರಾತಿಗಾಗಿ ಮಾನ್ಯ ಆಯುಕ್ತರು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ಹಣ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಆದರೆ ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ನಮ್ಮ ಹತ್ತಿರ ಹಣ ಇರುವುದಿಲ್ಲ ಸ್ಥಳೆಯರಿಂದ ಹಣ ಸಂಗ್ರಹಿಸಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಿಂಬರಹ ಕಳಿಸಿರುತ್ತಾರೆ.
ಆದ್ದರಿಂದ ತಾವುಗಳು ತಮ್ಮ ಸರಕಾರದಿಂದ ಅಥವಾ ಕೆ.ಕೆ.ಆರ್.ಡಿ.ಬಿ. ಅನುದಾನದಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಇನ್ನೂ ೬ ಕೋಟಿ ೫೦ ಲಕ್ಷ ಹಣ ನೀಡಿ ಡಾ. ಬಾಬು ಜಗಜೀವನ ರಾಮ ರವರ ಬೃಹತ್ತ ಭವನ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಕಲಬುರಗಿ ಜಿಲ್ಲಾ ಮಾದಿಗರ ಸಮಾಜದ ಅಭಿವೃದ್ಧಿ ಒಕ್ಕೂಟ ಸಮೀತಿ (ರಿ) ಕಲಬುರಗಿ ಈ ಸಂಘಕ್ಕೆ ಅನುಮತಿ ನೀಡಿ ಉಳಿದ ಹೆಚ್ಚುವರಿ ಹಣ ಈ ಸಂಘದ ಖಾತೆಗೆ ಜಮಾ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಡಾ. ಬಾಬು ಜಗಜೀವನ ರಾಮ ರವರ ಬೃಹತ್ತ ಭವನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿ ಮತ್ತು ಕಟ್ಟಡ ಕಾಮಗಾರಿಯನ್ನು ೪ ರಿಂದ ೫ ತಿಂಗಳವಳಗಾಗಿ ಖಂಡಿತವಾಗಿ ಪೂರ್ಣಗೊಳಿಸಿ ಕೊಡುತ್ತೇವೆ ಎಂದು ಮಾದಿಗ ಸಮಾಜದ ಎಲ್ಲಾ ಹಿರಿಯ ಹಾಗೂ ಯುವ ಮುಖಂಡರ ಸಮ್ಮುಖದಲ್ಲಿ ಭರವಸೆ ನೀಡಿದರು, ಇದರಿಂದ ಮಾದಿಗ ಸಮುದಾಯದ ಜನರಲ್ಲಿ ಸಂತೋಷದ ಮನೆ ಮಾಡಿತು.
ಈ ಸಂದರ್ಭದಲ್ಲಿ ಮುಖಂಡರಾದ ಲಿಂಗರಾಜ ತಾರಫೈಲ, ಮಲ್ಲಿಕಾರ್ಜುನ ಜೀನಕೇರಿ, ರಾಜು ವಾಡೇಕರ, ದಶರಥ ಕಲಗುರ್ತಿ, ಪರಮೇಶ್ವರ ಖಾನಾಪೂರ, ಮಲ್ಲಿಕಾರ್ಜುನ ದೊಡ್ಡಮನಿ, ರಾಜು ಕಟ್ಟಿಮನಿ, ರಮೇಶ ವಾಡೇಕರ, ಬಾಬು ಸುಂಠಾಣ, ಬಂಡೇಶ ರತ್ನಡಗಿ, ಶ್ರೀಮಂತ ಭಂಡಾರ, ಶಿವಪುತ್ರ ನಾಗನಳ್ಳಿ, ಮಲ್ಲಿಕಾರ್ಜುನ ಸರಡಗಿ, ಸಚಿನ ಕಟ್ಟಿಮನಿ, ರಂಜೀತ ಮೂಲಿಮನಿ, ಗುಂಡು ಸಂಗವಾರ, ಚಂದ್ರಕಾAತ ನಾಟೀಕರ, ಪ್ರದೀಪ ಬಾಚನಾಳಕರ್, ಶರಣು ಸಗರಕರ, ಕಾಸೀನಾಥ ಹಾದಿಮನಿ, ಪ್ರದೀಪ ಭಾವೆ, ವಿನೇಶ ಸೇರಿದಂತೆ ಇತರರು ಇದ್ದರು.