ದೊಡ್ಡಪ್ಪ ಅಪ್ಪ ದಾಸೋಹ ಜೀವನ ಪ್ರಬಂಧಕ್ಕೆ ಡಾಕ್ಟರೇಟ್

ಕಲಬುರಗಿ,ಜೂ.16:ಶರಣಬಸವೇಶ್ವರ ದಾಸೋಹ ಸಂಸ್ಥಾನದ ಹಿಂದಿನ ಪೀಠಾಧಿಪತಿ ಪರಮಪೂಜ್ಯ ದೊಡ್ಡಪ್ಪ ಅಪ್ಪ ಅವರ ದಾಸೋಹ ಜೀವನ ಕುರಿತಾಗಿ ಸಿದ್ಧಲಿಂಗಪ್ಪ ನಾಗೇಂದ್ರಪ್ಪ ಅವರು ಮಂಡಿಸಿದ ಪ್ರಬಂಧಕ್ಕೆ ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ.
ಗುಲ್ಬರ್ಗ ವಿವಿಯ ಕನ್ನಡ ಅಧ್ಯಯನ ವಿಭಾಗದಿಂದ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಅವರ ಮಾರ್ಗದರ್ಶದಲ್ಲಿ ಸಿದ್ಧಲಿಂಗಪ್ಪ ಅವರು ಪ್ರಬಂಧ ಮಂಡಿಸಿದ್ದು, ಸಿದ್ಧಲಿಂಗಪ್ಪ ಅವರು ಶರಣಬಸವೇಶ್ವರ ಶಿಕ್ಷಣ (ಬಿಎಡ್) ಮಹಾವಿದ್ಯಾಲಯದಲ್ಲಿ ಕನ್ನಡ ವಿಷಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ದಾಸೋಹದ ಅಡಿಪಾಯ ಗಟ್ಟಿಗೊಳಿಸಿದವರು. ಅಪ್ಪ ಅವರು ಹಾಕಿದ ದಾಸೋಹ ಪರಂಪರೆ ಮುನ್ನೆಡೆಸಿಕೊಂಡು ಬರುತ್ತಿರುವುದು ಸೇರಿದಂತೆ ಹಲವಾರು ಅಂಶಗಳು ಪ್ರಬಂಧದಲ್ಲಿ ಉಲ್ಲೇಖವಾಗಿವೆ. ಪೂಜ್ಯ ದೊಡ್ಡಪ್ಪ ಅಪ್ಪ ಅವರು ದಾಸೋಹ ಜತೆಗೆ ಮಹಿಳಾ ಶಿಕ್ಷಣಕ್ಕೂ ಅಡಿಪಾಯ ಹಾಕಿದವರಾಗಿದ್ದಾರೆ.