ಪಾಕೃತಿಕ ಸಂಪತ್ತಿಗೆ ಧಕ್ಕೆಯ ಅಭಿವೃದ್ಧಿ ಮೂರ್ಖತನ

ಚಿಕ್ಕಬಳ್ಳಾಪುರ.ಜು೧:ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಪ್ರಾಕೃತಿಕ ಸಿರಿ ಸಂಪತ್ ಆದ ನಂದಿ ಬೆಟ್ಟದ ಅಮೂಲ್ಯ ಪ್ರಾಕೃತಿಕ ಸಂಪತ್ತಿಗೆ ಧಕ್ಕೆ ತಂದು ಅದನ್ನು ಅಭಿವೃದ್ಧಿ ಪಡಿಸುವುದು ಎಂದರೆ ಅದು ಸರ್ಕಾರದ ಮೂರ್ಖತನ ಎಂದು ಖ್ಯಾತ ಪರಿಸರವಾದಿ ಎ.ಎನ್. ಎಲ್ಲಪ್ಪ ರೆಡ್ಡಿ ತಿಳಿಸಿದರು.


ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಡೀ ದೇಶದಲ್ಲಿ ಹಿಮಾಲಯ ಪರ್ವತ ಸಹ್ಯಾದ್ರಿ ಪರ್ವತಗಳು ಹೊರತುಪಡಿಸಿದರೆ ನಂತರದ ಸ್ಥಾನದಲ್ಲಿ ಔಷಧೀಯ ಸಸ್ಯ ಸಂಪತ್ತನ್ನು ಹಾಗೂ ಸಮೃದ್ಧ ನೀರಿನ ಜನಪದಗಳನ್ನು ಹೊಂದಿರುವುದು ನಂದೇ ಬೆಟ್ಟ ಮಾತ್ರ ಆಗಿದ್ದು ಈ ಮಹತ್ವವನ್ನು ಅರಿಯದ ಸರ್ಕಾರ ನಂದಿ ಬೆಟ್ಟಕ್ಕೆ ಮಾಡುವುದಕ್ಕೆ ಹೊರಟಿರುವುದು ಎಷ್ಟು ಮಾತ್ರ ಸರಿ ಎಂದು ಕಿಡಿಕಾರಿದರು.


ಜೂನ್ ೨ನೇ ತಾರೀಕು ನಾಳೆ ನಂದಿ ಬೆಟ್ಟದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯುತ್ತದೆ ಈ ಸಚಿವ ಸಂಪುಟ ಸಭೆಯಲ್ಲಿ ಕನಿಷ್ಠ ಪಕ್ಷ ಸಚಿವರು ನಂದಿ ಬೆಟ್ಟದ ಪ್ರಾಕೃತಿಕ ಸಿರಿಸಂಪತ್ತನ್ನು ಉಳಿಸುವ ಬಗ್ಗೆ ಒಂದು ಗಂಟೆ ಕಾಲ ಚರ್ಚೆ ನಡೆಸಬೇಕಾದ ಅವಶ್ಯಕತೆ ಇದೆ ನಂದಿ ಬೆಟ್ಟದ ಪ್ರಾಕೃತಿಕ ಸಂಪತ್ತಿನ ಬಗ್ಗೆ ಇವರು ಬದ್ಧತೆ ವ್ಯಕ್ತಪಡಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.


ವಿಶ್ವ ಪಾರಂಪರಿಕ ತಾಣವಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ನಂದಿ ಗಿರಿ ನಂದಿಬೆಟ್ಟ ಆಗಿದ್ದು ಇದು ೫ ನದಿಗಳ ಉಗಮ ಸ್ಥಾನ ಆಗಿದೆ ಇಲ್ಲಿನ ಜಲಸಂಪತ್ತನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಯತ್ನಿಸದೆ ಇಂದಿನ ಹಾಗೂ ಮುಂದಿನ ತಲೆಮಾರಿಗೆ ಶಾಪ ವಾಗುವ ಪ್ರವಾಸೋದ್ಯಮ ಅಭಿವೃದ್ಧಿಯ ಕಾಮಗಾರಿ ನಡೆಸುತ್ತಿರುವುದು ಉತ್ತಮ ಕಾರ್ಯ ಅಲ್ಲ ಎಂದರು.


ಮ ಕೇವಲ ಕನಿಷ್ಠ ಪ್ರವಾಸೀ ಕೇಂದ್ರವಾಗಿ ಮುಂದುವರಿಯಬೇಕು ಹೊರತು ಅದನ್ನು ಗರಿಷ್ಠ ಪ್ರವಾಸೀ ಕೇಂದ್ರವಾಗಿ ಬದಲಿಸಿ ಅಲ್ಲಿನ ಪರಿಸರ ಮತ್ತು ಜೀವ ಸಂಕುಲವನ್ನು ನಾಶ ಮಾಡುವುದು ಸರಿಯಲ್ಲ ಎಂದು ಪರಿಸರವಾದಿ ಯಲ್ಲಪ್ಪರೆಡ್ಡಿ ಮನವಿ ಮಾಡಿದರು.


ಅಭಿವೃದ್ಧಿ ಹೆಸರಿನಲ್ಲಿ ದಿನದಿಂದ ದಿನಕ್ಕೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ ಅಲ್ಲಿ ಯೋಗ ನಂದೀಶ್ವರ ದೇವಾಲಯ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಜನತೆ ಕೇವಲ ನಂದಿ ಬೆಟ್ಟಕ್ಕೆ ಮೋಜು ಮಾಡಲು ಬರುತ್ತಾರೆ ಅವರ ಮೋಜುಗಾರಿಕೆ ಎಷ್ಟಿದೆ ಎಂದರೆ ಲೋಡುಗಟ್ಟಲೆ ಕಾಂಡೋಮ್ ಹಾಕುವ ಪ್ರದೇಶವಲ್ಲ, ಅಭಿವೃದ್ಧಿ ಎಂದರೆ ಲೋಡುಗಟ್ಟಲೆ ಮಾದಕ ವಸ್ತುಗಳು ಸಿಗುವ ಪ್ರದೇಶವಾಗಿ ಮಾರ್ಪಟ್ಟಿದೆ ಎಂದು ಕಿಡಿಕಾರಿದರು.


ಅಭಿವೃದ್ಧಿ ಎಂದರೆ ಇರುವ ಪರಿಸರವನ್ನು ಉಳಿಸಿ, ಬೆಳೆಸೋದು ಎಂಬುದನ್ನು ಸರ್ಕಾರಗಳು ಅರಿಯಬೇಕಿದೆ. ಶ್ರೀಗಂಧ ಜಾಲರಿ ಮುಂತಾದ ಮರಗಳು, ಮಾಕಳಿ ಬೇರು ಸೇರಿದಂತೆ ಅನೇಕ ವನ್ಯ ಸಂಪತ್ತು ಈ ನಂದಿಗಿರಿ ದಾಮದಲ್ಲಿದೆ . ಇಂತಹ ಪ್ರದೇಶದಲ್ಲಿ ಡೈನಾಮೇಟೇಏ ಸಿಡಿಸಿ, ಅಲ್ಲಿನ ಪರಿಸರ ಮತ್ತು ಜೀವಸಂಕುಲವನ್ನು ನಾಶ ಮಾಡುವ ಹುನ್ನಾರವೇ ಈ ಗರಿಷ್ಠ ಪ್ರವಾಸೋದ್ಯಮ ಆಗಿದೆ ಎಂದರು.


ಸುದ್ದಿಗೋಷ್ಟಿಯಲ್ಲಿ ಯುಎಚ್‌ಆರ್‌ಎಸ್‌ಎಫ್ ಸಂಸ್ಥಾಪನಾಧ್ಯಕ್ಷ ಸಿ.ಡಿ. ಕಿರಣ್, ಸಾಮಾಜಿಕಹೋರಾಟಗಾರರಾದ ಮುಷ್ಟೂರು ಶ್ರೀಧರ್, ಕ್ಯಾತಪ್ಪ, ರಫೀಕ್, ಜ್ಯೋತಿ ಇದ್ದರು.