Home ಜಿಲ್ಲೆ ಕಲಬುರಗಿ ದೇವಲಗಾಣಗಾಪುರ: ಹೆಚ್‍ಪಿವಿ ಲಸಿಕೆ ಅಭಿಯಾನ

ದೇವಲಗಾಣಗಾಪುರ: ಹೆಚ್‍ಪಿವಿ ಲಸಿಕೆ ಅಭಿಯಾನ

ಕಲಬುರಗಿ,ಮಾ.24-ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲಗಾಣಗಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಚ್‍ಪಿವಿ ಲಸಿಕ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಆಡಳಿತ ವೈದ್ಯಾಧಿಕಾರಿಗಳಾದ ಡಾ.ವೇಣುಗೋಪಾಲ್ ದೇಶ್ಪಾಂಡೆ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ, ಈ ಲಸಿಕೆಯು 14 ವರ್ಷ ತುಂಬಿರುವ ಮತ್ತು ಹದಿನೈದು ವರ್ಷದೊಳಗಿರುವ ಹೆಣ್ಣು ಮಕ್ಕಳಿಗೆ ನಿಡುತ್ತಿದ್ದು ಈ ಲಸಿಕೆ ತೆಗೆದುಕೊಳ್ಳುವುದರಿಂದ ಗರ್ಭಕಂಠದ ಕ್ಯಾನ್ಸರ್ ತಡೆಯಲು ಸಾಧ್ಯವಾಗುತ್ತದೆ. ಹಾಗಾಗಿ 14 ವರ್ಷ ತುಂಬಿರುವ ಪ್ರತಿಯೊಂದು ಹೆಣ್ಣು ಮಕ್ಕಳು ಈ ಲಸಿಕೆ ತೆಗೆದುಕೊಳ್ಳುವುದು ಸೂಕ್ತ. ಗರ್ಭಕಂಠ ಕ್ಯಾನ್ಸರ್ ಬರಲು ಹಲವಾರು ಕಾರಣಗಳಿವೆ. ಸ್ತ್ರೀರೋಗ ತಜ್ಞರಿಗೆ ಭೇಟಿ ಮಾಡಿ ಇದರ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ. ಈ ಲಸಿಕೆಯು ಹೊಸದೇನಲ್ಲ. ಜಗತ್ತಿನಾದಂತ ಈಗಾಗಲೇ 50 ಕೋಟಿ ಲಸಿಕೆಗಳನ್ನು ನೀಡಲಾಗಿದೆ. ಕಳೆದ 15 ವರ್ಷಗಳ ಅಂಕಿ ಅಂಶಗಳ ಪ್ರಕಾರ ಎಚ್‍ಪಿವಿ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತುಪಡಿಸಿವೆ. ಭಾರತದ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್‍ಗಳಲ್ಲಿ ಗರ್ಭಕಂಠ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಲಸಿಕೆಯ ಪ್ರಮುಖ ಮಾರ್ಗ. ಲಸಿಕೆ ಮತ್ತು ನಿಯಮಿತ ತಪಾಸಣೆಯಿಂದ ಸಾವು ಮತ್ತು ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಮಾಹಿತಿ ನೀಡಿದರು.
ಈ ಅಭಿಯಾನವು ಪರಿಣಾಮಕಾರಿಯಾಗಿ ಯಶಸ್ವಿಯಾಗಬೇಕಾದರೆ ಇಲಾಖೆ ಸಿಬ್ಬಂದಿಗಳ ಅಷ್ಟೇ ಅಲ್ಲ ಸಮಾಜಮುಖಿಯಾಗಿ ಕೆಲಸ ಮಾಡುವ ಪ್ರತಿಯೊಬ್ಬರ ಪಾತ್ರವು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ. ಡಾ.ರಾಜೇಶ್ವರಿ, ಡಾ.ಶೈಲಜಾ, ಡಾ.ಪಲ್ಲವಿ, ಶಶಿಕಾಂತ್ ಹಯ್ಯಳ್ಕರ್, ಹಿರಿಯ ಪ್ರಾಥಮಿಕ ಸುರಕ್ಷಣಾಧಿಕಾರಿಗಳಾದ ತಾರಾ, ಆರ್.ಕೆಎಸ್.ಕೆ ಆಪ್ತ ಸಮಾಲೋಚಕಾರದ ಮಲ್ಲಿಕಾರ್ಜುನ ಸಿಂಗೆ , ಪಿ ಎಚ್. ಸಿ. ಓ ಸ್ಟೆಪ್ಪಿ, ಎಚ್ ಐ ಓ ಸುರೇಶ್ ಸಿಂದೆ ಕೇಂದ್ರದ ಎಲ್ಲಾ ಸಿಬ್ಬಂದಿ ವರ್ಗ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲಿ ಉಪಸ್ಥಿತರಿದ್ದರು.