Home ಜಿಲ್ಲೆ ಕಲಬುರಗಿ ಕನ್ನಡ ಮಾಧ್ಯಮ ಶಾಲೆ ಅನುದಾನಕ್ಕೆ ಒಳಪಡಿಸಲು ಒತ್ತಾಯ

ಕನ್ನಡ ಮಾಧ್ಯಮ ಶಾಲೆ ಅನುದಾನಕ್ಕೆ ಒಳಪಡಿಸಲು ಒತ್ತಾಯ

ಕಲಬುರಗಿ,ಫೆ.3-ಕಲ್ಯಾಣ ಕರ್ನಾಟಕದ 1995ರ ನಂತರದ ಎಲ್ಲಾ ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ವತಿಯಿಂದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಸಂಘದ ಜಿಲ್ಲಾಧ್ಯಕ್ಷ ಅನಿಲಕುಮಾರ್ ಎನ್ ಡಾಂಗೆ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮನವಿ ಸಲ್ಲಿಸಲಾಯಿತು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣದ ಪ್ರಗತಿ ಕುಂಠಿತವಾಗಿರುವುದರ ಜೊತೆಗೆ, ಕನ್ನಡವು ವಿವಿಧ ಭಾಷೆಗಳಿಂದ ಬಡ ಕೂಸಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಕೆಲವೇ ಕೆಲವು ಅನುದಾನ ರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಕನ್ನಡ ಮಾಧ್ಯಮದಿಂದ ಆಂಗ್ಲ ಮಾಧ್ಯಮಕ್ಕೆ ಪರಿವರ್ತನೆಯಾಗಲು ಅವಕಾಶ ಸರಕಾರ ಮತ್ತು ಶಿಕ್ಷಣ ಇಲಾಖೆ ನೀಡಿದಾಗಲೂ ಮಾತೃ ಭಾಷೆಯ ಮೇಲಿನ ಮಮಕಾರದಿಂದ ಇತರೆ ಭಾಷೆಗೆ ಪರಿವರ್ತನೆಯಾಗದೇ ಕನ್ನಡ ಭಾಷೆಯಲ್ಲಿಯೇ ಬೋಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿರುತ್ತದೆ. ಸರಕಾರಿ ಕನ್ನಡ ಶಾಲೆಗಳಲ್ಲಿ ದಾಖಲಾತಿ ಕೊರತೆಯಾಗುತ್ತಿದೆ ಎಂಬ ಕಾರಣಕ್ಕೆ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸುತ್ತಿರುವ ಸಂದರ್ಭದಲ್ಲಿಯೂ ಎದೆಗುಂದದೆ ಮಾತೃ ಪ್ರೇಮದಿಂದ, ಕನ್ನಡ ಮಾಧ್ಯಮ ಅನುದಾನರಹಿತ ಶಾಲೆಗಳು ಕನ್ನಡ ಮಾಧ್ಯಮದಲ್ಲಿಯೇ ಉಳಿದುಕೊಂಡಿರುವುದು ಸಾಹಸದ ಕೆಲಸವಾಗಿದೆ. ಆದರೆ ದಿನದಿಂದ ದಿನಕ್ಕೆ ಸರಕಾರದ ಆಂಗ್ಲ ಮತ್ತು ಎಲ್ಲಾ ಉಚಿತ (ಸರಕಾರಿ ಮಟ್ಟದಲ್ಲಿ ಒಂದು ಮಗುವಿಗೆ ಎಷ್ಟು ಆರ್ಥಿಕ ಹೊರೆ ಯಾಗುತ್ತಿದೆ) ಎಂಬ ಪೈಪೆÇೀಟಿಯಿಂದ ಹಾಗೂ ಶಿಕ್ಷಣ ಇಲಾಖೆ ವಿಧಿಸುತ್ತಿರುವ ಅಸಂವಿಧಾನಿಕ ಹಲವಾರು ನಿಯಮಗಳಿಂದ ಆರ್ಥಿಕವಾಗಿ ನಲುಗಿಹೋಗಿದೆ. ಆದ ಕಾರಣ ನಮ್ಮ ಮಾತೃ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕಾಗಿ ಸದರಿ ಕಲ್ಯಾಣ ಕರ್ನಾಟಕ ಕನ್ನಡ ಮಾಧ್ಯಮ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅನುದಾನವನ್ನು ನೀಡುವುದು ಮತ್ತು ನಿಯಮ ನಿಬಂಧನೆಗಳಲ್ಲಿ ಸಡಿಲಿಕೆ ನೀಡಿ ಶಾಲೆಗಳನ್ನು ಉಳಿಸಿ ಕನ್ನಡ ಬೆಳೆಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಚಂದ್ರಶೇಖರ್ ಕರಜಿಗಿ, ಮಹಿಬೂಬ್ ನರಿಬೋಳ, ನಿಂಗಪ್ಪ ಆರ್, ಗುಂಡು ರಾವ್ ದೇಶಮುಖ್, ಅಣ್ಣ ರಾವ್ ಹುಗ್ಗಿ, ಸಲೀಂ ಶೇಕ್, ರೇವಣಸಿದ್ದ ನಂದೂರ, ನಿಂಗಪ್ಪ ಮಯಾರ್, ದೇಸು ರಾಥೋಡ್, ಸಂತೋಷ್ ಜಾದವ್, ಅವಿನಾಶ್ ಕೊಡ್ದೋಳ್ ಸೇರಿದಂತೆ ಇತರರು ಇದ್ದರು.