
ಕಲಬುರಗಿ,ಫೆ.18: ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಸರಕಾರದಿಂದ ಬರಬೇಕಾದ 38 ತಿಂಗಳ ಹಿಂಬಾಕಿ ವೇತನ ಪಾವತಿಸುವಂತೆ ಪ್ರಿಯದರ್ಶಿನಿ ಗ್ರಾಮೀಣ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷೆ ಶರಣಮ್ಮ ( ಸುಮಾ) ಕವಲ್ದಾರ್ ಮತ್ತು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್ ಪಾಟೀಲ ನರಿಬೋಳ ಅವರು ಆಗ್ರಹಿಸಿದರು.
ನಗರದಲ್ಲಿಂದು ಪತ್ರಿಕಾಭವನದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,ಇಂದಿನವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆ ಅಡಿಯಲ್ಲಿ ಪಾವತಿಸಬೇಕಾಗಿರುವ 4200 ಕೋಟಿ ಮೊತ್ತವನ್ನು ಸರಕಾರ ಪಾವತಿಸಿಲ್ಲ.2024ರ ಜನವರಿ 1 ರಿಂದ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡದೇ ಇರುವದರಿಂದ ಸಾರಿಗೆ ನೌಕರರು ಸಂಕಷ್ಟದಲ್ಲಿದ್ದಾರೆ.ಅವರ ಹೋರಾಟಕ್ಕೆ ನಮ್ಮ ಸಂಘಟನೆಗಳ ಬೆಂಬಲವಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಅಶ್ವಿನಿಕುಮಾರ್ ಸಿಂಗ್, ಸಂದೀಪ್ ಭರಣಿ, ಹುಚ್ಚೇಶ್ವರ ವಠಾರ್ ಉಪಸ್ಥಿತರಿದ್ದರು.

























