ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಅನ್ಯಾಯ:ಫಸಲ್ ಬಿಮಾ ಪರಿಹಾರ ಜಿಲ್ಲೆಯ ರೈತರಿಗೆ ಸಿಗುತ್ತಿಲ್ಲ: ಖೂಬಾ

ಬೀದರ್:ಜೂ.22: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ರೈತರು ಕಂಗಾಲಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಪ್ರತಿಪಾದಿಸಿದರು.
ರವಿವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ನಾನು ಸಚಿವನಾಗಿದ್ದಾಗ ಜಿಲ್ಲೆಗೆ 600 ಕೋಟಿ ಫಸಲ್ ಬಿಮಾ ಪರಿಹಾರ ಹಣ ತಂದಿದ್ದೆ. ಆದರೆ 2023-24 ರಲ್ಲಿ 2 ಲಕ್ಷ 1 ಸಾವಿರ ಜನ ನೊಂದಣಿ ಮಾಡಿಸಿದ್ದು ಕೇವಲ 12.60 ಕೋಟಿ ಮಾತ್ರ ನೀಡಲಾಗಿದೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ 2 ಲಕ್ಷ 4 ಸಾವಿರ ಜನ ನೊಂದಣಿ ಮಾಡಿಸಿದ್ದು 656 ಕೋಟಿ ಫಸಲ ಬಿಮಾ ಪರಿಹಾರ ಹಣ ನೀಡಲಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆ ತರುವ ವಿಷಯವಾಗಿದೆ. ಜಿಲ್ಲೆಯಲ್ಲಿ ಒಂದು ಸಾಚಾ ಕಂಪನಿಯಿದೆ. ಈಶ್ವರ ಖಂಡ್ರೆ, ಅಮರ ಖಂಡ್ರೆ ಮತ್ತು ಸಾಗರ ಖಂಡ್ರೆ ಅದರ ಸದಸ್ಯರಾಗಿದ್ದಾರೆ. “ಸೌ ಚುಹೆ ಖಾಕೆ ಬಿಲ್ಲಿ ಹಜ್ ಕೋ ಗಯಾ” ಎನ್ನುವಂತೆ ಈ ಮೂವರ ಹೇಳಿಕೆಗೂ ನಡವಳಿಕೆಗೂ ಸಂಬಂಧವೇ ಇಲ್ಲ ಎಂದರು. ರೈತರ ಹೆಸರು ಹೇಳಿ ರಾಜಕೀಯ ಮಾಡುವ ಸಚಿವರ ಕುಟುಂಬ ರೈತರ ಶೋಷಣೆ ಮಾಡುತ್ತಿದೆ. ಡಿಸಿಸಿ ಬ್ಯಾಂಕ್ ನಿಂದ ವಿಮಾ ಹಣ ಕಟ್ಟುವುದಿಲ್ಲ ಎಂದು ಅಮರ ಖಂಡ್ರೆ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಂ.ಜಿ.ಎಸ್.ಎಸ್.ಕೆ. ಮೇಲೆ 478 ಕೋಟಿ ಸಾಲ ಇದೆ. ಅದು ಡಿಸಿಸಿ ಬ್ಯಾಂಕ್ ಗೆ ಕಟ್ಟಿಲ್ಲ. ಖಂಡ್ರೆ ಕುಟುಂಬದ ರಾಕ್ಷಸ ಪ್ರವೃತ್ತಿ ಆಡಳಿತದಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಕೊನೇ ಹಾಡೋಣ ಎಂದು ಖೂಬಾ ತಮ್ಮ ಆಕ್ರೋಶ ಹೊರಹಾಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ ಜೂ. 25 ರಂದು ತುರ್ತು ಪರಿಸ್ಥಿತಿ ಐವತ್ತನೇ ವರ್ಷಾಚರಣೆ ಪ್ರಯುಕ್ತ ಮೈಲೂರ ಕ್ರಾಸ್ ಹತ್ತಿರ ಕರಾಳ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಛಲವಾದಿ ನಾರಾಯಣಸ್ವಾಮಿ ಆಗಮಿಸುತಿದ್ದಾರೆ ಎಂದರು. ರಾಜ್ಯದಲ್ಲಿ ಜನತೆಗೆ ವಸತಿ ನೀಡಲು ಹಣ ಕೇಳುತಿದ್ದಾರೆ ಎನ್ನುವ ಮಾತು ಅವರದೇ ಪಕ್ಷದ ಶಾಸಕ ಬಿ.ಆರ್.ಪಾಟೀಲ ಆಡಿರುವ ಆಡಿಯೋ ಬಹಿರಂಗವಾಗಿದೆ. ಜಿಲ್ಲೆಯಲ್ಲಿ ಫಸಲ್ ಬಿಮಾ ನಿರ್ವಹಣೆ ಸರಿಯಿಲ್ಲ. ಪೆÇಲೀಸ್ ವ್ಯವಸ್ಥೆ ದುರ್ಬಲವಾಗಿದೆ. ಯುವಕರು ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಓಡಾಡುತಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹೋರಾಟಗಾರರ ಮೇಲೆ ಕೇಸ್ ದಾಖಲಾಗುತ್ತಿವೆ. ಎಟಿಎಂ ದರೋಡೆಕೋರರ ಸುಳಿವಿಲ್ಲ. ಅಸಮರ್ಥ ಅಧಿಕಾರಿಗಳ ವರ್ಗಾವಣೆ ಇಲ್ಲ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಪಾಟೀಲ ತಿಳಿಸಿದರು.
ಇದೇ ವೇಳೆ ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಜ್ಞಾನೇಶ್ವರ ಪಾಟೀಲ, ಶ್ರೀನಿವಾಸ ಚೌಧರಿ, ಬಸವರಾಜ ಪವಾರ್, ಶಶಿಧರ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.