
ಕಲಬುರಗಿ,ಡಿ.17-2025ನೇ ಸಾಲಿನಲ್ಲಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡವರ ಖಾತೆಗೆ 2,73,24,849 ರೂಪಾಯಿಗಳನ್ನು ಮರಳಿ ಜಮೆ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸೈಬರ್ ಅಪರಾಧ ಸಂಬಂಧಿತ ಪ್ರಕರಣಗಳ ಸೂಕ್ತ ತನಿಖೆಗೆ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕ ಸಂಜೀವಕುಮಾರ ಎನ್.ಕುಂಬಾರಗೇರೆ ಅವರ ನೇತೃತ್ವದಲ್ಲಿ ಎ.ಎಸ್.ಐ ದೇವಿಂದ್ರಪ್ಪಾ, ತನಿಖಾ ಸಹಾಯಕ ಸಿಬ್ಬಂದಿಗಳಾದ ಸುನೀಲಕುಮಾರ, ಈರಣ್ಣ, ಕುಶಾಲ್ ರಾಠೋಡ್, ತಾಂತ್ರಿಕ ಸಹಾಯಕ ಸಿಬ್ಬಂದಿಗಳಾದ ಪ್ರಶಾಂತ, ಸಂತೋಷ ಹಾಗೂ ಆನ್‍ಲೈನ್ ಪೋರ್ಟಲ್ ಸಹಾಯವಾಣಿ-1930 ಕರ್ತವ್ಯ ನಿರ್ವಹಣೆ ಸಿಬ್ಬಂದಿಗಳಾದ ಸುಜಾತ, ಅಂಬ್ರೇಶ, ವಿಠ್ಠಲ, ಅಪರಾಧ ದಳದ ಸಿಬ್ಬಂದಿಗಳಾದ ರಾಮು ಪವಾರ, ಹೊನ್ನುರ್ ಸಾಬ್, ಅಮರನಾಥ, ಶರಣಬಸಪ್ಪ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ವಿವಿಧ ಸೈಬರ್ ಅಪರಾಧಗಳ ಮೂಲಕ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 2025ನೇ ಸಾಲಿನಲ್ಲಿ ಕಳೆದುಕೊಂಡ/ಮೋಸಕ್ಕೊಳಗಾದ ಹಣ ಮತ್ತು ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ದಾಖಲಾದ ಒಟ್ಟು 2,211 ಪ್ರಕರಣಗಳಿಂದ ವಂಚನೆಗೆ ಒಳಗಾದ ಒಟ್ಟು 8.93 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 96.82 ಲಕ್ಷ ಹಾಗೂ ಸೈಬರ್ ವಂಚನೆಗೊಳಗಾಗಿ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಒಟ್ಟು 40 ಪ್ರಕರಣಗಳಿಂದ ವಂಚನೆಗೊಳಗಾದ ಒಟ್ಟು 12.72 ಕೋಟಿ ಮೊತ್ತದಲ್ಲಿ ವಶಪಡಿಸಿಕೊಂಡ 1.76 ಕೋಟಿ ಸೇರಿ 2.73 ಕೋಟಿ ರೂಪಾಯಿಗಳನ್ನು ನೊಂದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ವಿವರಿಸಿದರು.
ಅಲ್ಲದೆ ಇತ್ತೀಚೆಗೆ ದಾಖಲಾದ ಕೆಲವೊಂದು ಪ್ರಕರಣಗಳಲ್ಲಿ ವಂಚನೆಗೆ ಒಳಗಾದ ಸಾರ್ವಜನಿಕರು ಗೋಲ್ಡನ್ ಆವರದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಶೇ.70 ರಿಂದ 85 ರಷ್ಟು ಹಣವನ್ನು ಆರೋಪಿತರ ಖಾತೆಯಿಂದ ವಂಚನೆಗೆ ಒಳಗಾದವರ ಖಾತೆಗೆ ಮರಳಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು.
ಸೈಬರ್ ಅಪರಾಧಗಳನ್ನು ಬೇಧಿಸಿ ನೊಂದವರ ಖಾತೆಗಳಿಗೆ ಹಣ ಮರಳಿ ಜಮಾವಣೆ ಮಾಡುವಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಅವರು ಪ್ರಶಂಸನಾ ಪತ್ರ ನೀಡಿ ಶ್ಲಾಘಿಸಿದರು.
ಗೋಲ್ಡನ್ ಆವರ್
ಕೆಲವೊಂದು ಸೈಬರ್ ಅಪರಾಧಗಳು ಹೆಚ್ಚಾಗಿ ಶನಿವಾರ ಹಾಗೂ ಭಾನುವಾರಗಳಂದು ಜರುಗುತ್ತಿದ್ದು, ಈ ಎರಡೂ ದಿನಗಳಂದು ಬ್ಯಾಂಕ್ ರಜೆ ಇರುವ ಕಾರಣ ಸಾರ್ವಜನಿಕರು ಬ್ಯಾಂಕ್‍ಗಳಿಗೆ ಭೇಟಿ ನೀಡಲು ಸಾಧ್ಯವಾಗದೇ ಪ್ರಕರಣ ದಾಖಲಿಸಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ತಿಳುವಳಿಕೆ ಇದೆ. ಆದರೆ, ಸಾರ್ವಜನಿಕರು ಯಾವುದೇ ಸೈಬರ್ ಅಪರಾಧಕ್ಕೊಳಗಾದಲ್ಲಿ ಗೋಲ್ಡನ್ ಅವರ ಎಂದರೆ, ವಂಚನೆಗೊಳಗಾದ 24 ಗಂಟೆಯೊಳಗಾಗಿ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಿದಲ್ಲಿ ಮೋಸಕ್ಕೊಳಗಾದ/ವಂಚನೆಗೊಳಗಾದ ಹಣವನ್ನು ಮರಳಿ ಪಡೆಯಲು ಶೇ.70 ರಿಂದ 85 ರಷ್ಟು ಸಾಧ್ಯವಾಗುತ್ತದೆ. ಆದ್ದರಿಂದ ಸಾರ್ವಜನಿಕರು ವಂಚನೆಗೊಳಗಾದ 24 ಗಂಟೆಯೊಳಗಾಗಿ ಸೈಬರ್ ಸಹಾಯವಾಣಿ 1930 ಪೋರ್ಟಲ್ ಮೂಲಕ ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ಮಹತ್ವದ ಸೂಚನೆ
1.ಯಾವುದೇ ಬ್ಯಾಂಕ್, ಪೆÇಲೀಸ್ ಅಥವಾ ಸರ್ಕಾರಿ ಅಧಿಕಾರಿಗಳು OTP, PIN, CVV, ಪಾಸ್‍ವಡ್ರ್ಗಳನ್ನು ಕೇಳುವುದಿಲ್ಲ.
- ಅನಪೇಕ್ಷಿತ ಕರೆ, ಸಂದೇಶ, ಲಿಂಕ್ ಅಥವಾ ಕಿಖ ಕೋಡ್‍ಗಳಿಗೆ ಪ್ರತಿಕ್ರಿಯಿಸಬೇಡಿ.
- ಹಣ ವಂಚನೆ ಸಂಭವಿಸಿದ ಕೂಡಲೇ ಸೈಬರ್ ಸಹಾಯವಾಣಿ 19.30 ಗೆ ಕರೆ ಮಾಡಿ ಅಥವಾ WWW.Cybercrime.gov.in ನಲ್ಲಿ
ಆನ್‍ಲೈನ್ ದೂರು ದಾಖಲಿಸಿ. - ಫೇಕ್ ಅಥವಾ ಹ್ಯಾಕ್ ಆದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಸಂಬಂಧಿತ ಪ್ಲಾಟ್ ಫಾರ್ಮ್‍ನಲ್ಲಿ ತಕ್ಷಣ ರಿಪೆÇೀರ್ಟ್ ಮಾಡಿ.
- ನಿಮ್ಮ ಬ್ಯಾಂಕ್, UPI, ಇಮೇಲ್ ಹಾಗೂ ಸೋಶಿಯಲ್ ಮೀಡಿಯಾ ಪಾಸ್‍ವಡ್ರ್ಗಳನ್ನು ನಿಯಮಿತವಾಗಿ ಬದಲಿಸಿ.
























