ಸಂಸ್ಕೃತಿಯಿಂದ ಮಕ್ಕಳ ಭವಿಷ್ಯ ಉಜ್ವಲ: ಎಸ್.ಸತೀಶ್

ಕೋಲಾರ,ಜು,೧-ಇತ್ತೀಚಿಗೆ ಮಕ್ಕಳು ತಮ್ಮ ತಂದೆ ತಾಯಿಯವರಿಗೆ ಗೌರವ ನೀಡುವುದು ಕಡಿಮೆ ಆಗಿದೆ ಮಕ್ಕಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಯುವುದು ಬಹಳ ಅವಶ್ಯ. ಶಿಕ್ಷಣದೊಂದಿಗೆ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸಿದರೆ ಮಕ್ಕಳ ಬದುಕು ಉಜ್ವಲವಾಗುತ್ತದೆ ಎಂದು ಉಪ ಕಾನೂನು ನೆರವು ಅಭಿರಕ್ಷಕರಾದ ಎಸ್.ಸತೀಶ್ ಅವರು ತಿಳಿಸಿದರು.


ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಕೋಲಾರ ಹಾಗೂ ವಕೀಲರ ಸಂಘ, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಅರಿವು ಕಾರ್ಯಕ್ರಮವನ್ನು ಕೋಲಾರದ ಸರ್ಕಾರಿ ಮಹಿಳಾ ಪ್ರೌಢ ಶಾಲೆ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು, ಸದಸ್ಯ ಕಾರ್ಯದರ್ಶಿಗಳ ಆದೇಶದ ಮೇರೆಗೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.


ಜೀವನದಲ್ಲಿ ಧ್ಯಾನ ಮಾಡುವುದರಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳು ಮನೆಯಲ್ಲಿ ತಂದೆ ತಾಯಿಗಳಿಗೆ ಮತ್ತು ಶಾಲೆಯಲ್ಲಿ ಶಿಕ್ಷಕರಿಗೆ ಗೌರವವನ್ನು ಕೊಡಬೇಕು. ಇತ್ತೀಚಿಗೆ ಮಕ್ಕಳು ಮೊಬೈಲ್ ವ್ಯಸನಗಳಾಗಿದ್ದರೆ ಸದರಿ ಮೊಬೈಲ್ ವ್ಯಸನದಿಂದ ಮಕ್ಕಳನ್ನು ಮುಕ್ತಿ ಮಾಡಲು ಪುರ್ನವಸತಿ ಕೇಂದ್ರಗಳನ್ನು ತೆರೆಯಬೇಕಾಗಿರುತ್ತದೆ. ಪಾಲಕರು ಮಕ್ಕಳಿಗೆ ಮೊಬೈಲ್ ನೀಡಬಾರದೆಂದು ತಿಳಿಸಿದರು.


ಅಷ ಅಲ್ಲದೇ ಇತ್ತೀಚಿಗೆ ಮಕ್ಕಳು ತಂಬಾಕು ಉತ್ಪನ್ನ ಮತ್ತು ಮಾಧಕ ವಸ್ತುಗಳಿಗೆ. ವ್ಯಸನಿಗಳಾಗುತ್ತಿದ್ದಾರೆ. ಆದರಿಂದ ಮಕ್ಕಳು ಶಿಕ್ಷಣ ಕುಂಟಿತವಾಗಿ ಅವರ ಜೀವನ ಹಾಳಾಗುತ್ತಿದೆ. ಅಷ ಅಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರೆ ಎಂದು ತಿಳಿಸಿದರು. ಇತ್ತೀಚಿಗೆ ಎಲ್ಲ ಕಡೆ ಬಾಲ್ಯವಿವಾಹ ಮಾಡುವುದು ಹೆಚ್ಚಾಗುತ್ತದೆ ಅದು ಸಹ ಮಕ್ಕಳ ಶಿಕ್ಷಣ ಹಕ್ಕಿನ ಉಲ್ಲಂಘನ ಆಗುತ್ತದೆ ೧೮ ವಷದ ಒಳಗಿನ ಹೆಣ್ಣು ಮಕ್ಕಳಿಗೆ ಹಾಗೂ ೨೧ ವಷ ಒಳಗಿನ ಗಂಡು ಮಕ್ಕಳಿಗೆ ಬಾಲ್ಯ ವಿವಾಹ ಮಾಡುವವರಿಗೆ ಬಾಲ್ಯ ವಿವಾಹ ನಿಷಧ ಕಾಯ್ದೆಯ ಅಡಿಯಲ್ಲಿ ೨ ವಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದರು ಇತ್ತೀಚಿಗೆ ಮಕ್ಕಳು ಮೋಟಾರ್ ವಾಹನಗಳನ್ನು ಚಾಲನೆ ಮಾಡುತ್ತಾರೆ. ಆ ರೀತಿ ೧೮ ವಷದ ಒಳಗಿನ ಮಕ್ಕಳು. ಮೋಟಾರ್ ವಾಹನಗಳನ್ನು ಚಲಾವಣೆ ಮಾಡುವುದು ಕಾನೂನು ಅಡಿಯಲ್ಲಿ ಅಪರಾದ ಅಷ ಅಲ್ಲದೆ ಮಕ್ಕಳಿಗೆ ಮೋಟಾರ್ ವಾಹನಗಳನ್ನು ಕೊಡುವುದರಿಂದ ಪಾಲಕರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಇರುತ್ತದೆ ಎಂದು ತಿಳಿಸಿದರು.


ಶಿಕ್ಷಕರಾದ ರಾಜಣ್ಣರವರು ಮಕ್ಕಳಿಗೆ ಮಾಧಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ಪ್ರತಿಜ್ಞಾ ವಿಧಿ ಭೋಧಿಸಿದರು. ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಶಶಿವಂದನ ಕೆ.ಎಸ್. ಸರ್ಕಾರಿ ಮಹಿಳಾ ಪ್ರೌಢ ಶಾಲೆ ಕೋಲಾರ ಇವರು ವಹಿಸಿದ್ದರು.


ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರು ಶ್ರೀಮತಿ ಶಶಿವಂದನ ಕೆ.ಎಸ್, ಈಶ್ವರಪ್ಪ ವಕೀಲರು, ರಾಜಣ್ಣ ಶಿಕ್ಷಕರು ಸರ್ಕಾರಿ ಮಹಿಳಾ ಪ್ರೌಢ ಶಾಲೆ ಕೋಲಾರ ಶಾಲೆಯ ಮಕ್ಕಳು, ಶಿಕ್ಷಕರು ಭಾಗವಹಿಸಿದ್ದರು.