Home ಜಿಲ್ಲೆ ಅಕ್ಷರ ಜ್ಞಾನದ ಜತೆ ಇರಲಿ ಸಾಂಸ್ಕøತಿಕ ಅರಿವು : ಡಾ. ಶಂಭುಲಿಂಗ ಶಿವಾಚಾರ್ಯರು

ಅಕ್ಷರ ಜ್ಞಾನದ ಜತೆ ಇರಲಿ ಸಾಂಸ್ಕøತಿಕ ಅರಿವು : ಡಾ. ಶಂಭುಲಿಂಗ ಶಿವಾಚಾರ್ಯರು

ಕಮಲನಗರ:ಮಾ.10: ಶಿಕ್ಷಣ, ಅಕ್ಷರ ಜ್ಞಾನದ ಜತೆಗೆ ಸಾಂಸ್ಕøತಿಕ ಅರಿವು ಬೆಳೆಸಿಕೊಂಡು ದೇಶದ ರಾಯಭಾರಿಗಳಾಗಿ ಕಲೆ-ಸಂಸ್ಕøತಿಯನ್ನು ಮುಮದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ವಿದ್ಯಾರ್ಥಿಗಳು ಮಾಡಬೇಕು ಎಂದು ಉದಗೀರ-ಡೋಣಗಾಂವ್(ಎಂ) ಹಾವಗಿಸ್ವಾಮಿ ಮಠದ ಪೀಠಾಧಿಪತಿ ಡಾ| ಶಂಭುಲಿಂಗ ಶಿವಾಚಾರ್ಯರು ತಿಳಿಸಿದರು.

ತಾಲ್ಲೂಕಿನ ಡೋಣಗಾಂವ್(ಎಂ) ಗ್ರಾಮದ ಸರ್ಕಾರಿ ಎಂಪಿಎಸ್ ಶಾಲೆ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ನೇಹ ಸಮ್ಮೆಳನದಲ್ಲಿ ಅವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಅತೀ ಹೆಚ್ಚು ಸಂಸ್ಕøತಿ, ಕಲೆ, ವಿಭೀನ್ನವಾದ ಭಾಷೆ ಇದ್ದರೂ ಒಂದೇ ನೆಲದಲ್ಲಿ ಬಾಳುವ ದೇಶದ ಭಾರತ. ಶಿಕ್ಷಣದ ಜತೆಗೆ ಕಲೆ, ಶ್ರೀಮಂತ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ ಮಾಡಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ವೇದಿಕೆ ಸೂಕ್ತವಾಗಿದೆ ಎಂದು ಹೇಳಿದರು.

ಕ.ರಾ.ಸರ್ಕಾರಿ ನೌಕರರ ಸಂಘ ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಡಾ| ಸುನೀಲಕುಮಾರ ಕಸ್ತೂರೆ ಮಾತನಾಡಿ, ಪ್ರತಿ ಮಕ್ಕಳಲ್ಲೂ ಒಂದೊಂದು ರೀತಿಯ ಕೌಶಲ್ಯವಿರುತ್ತದೆ. ಅದಕ್ಕೆ ತಕ್ಕಂತೆ ನಾವು ಅವಕಾಶ ಹಾಗೂ ಅನುಕೂಲಗಳನ್ನು ಮಾಡಿಕೊಡಬೇಕು ಎಂದರು.

ಸಿಆರ್‍ಸಿ ರಮಾಕಾಂತ ಕಾಳೆ, ಅದ್ಯಕ್ಷ ಬಸವರಾಜ ಪಾಟೀಲ, ವಿಜಯಕುಮಾರ ವಿಠ್ಠಲರಾವ ತುರೆ, ಶ್ರೀನಿವಾಸ ಮಂಠಾಳೆ ಸೇರಿದಂತೆ ಶಿಕ್ಷಕ ಸಿಬ್ಬಂದಿ ಇದ್ದರು.

ಹಳೆ ವಿದ್ಯಾರ್ಥಿ ಪ್ರಮುಖರಿಂದ ಶಾಲೆ ಶಿಕ್ಷಕರಿಗೆಲ್ಲರಿಗೂ ಸನ್ಮಾನಿಸಲಾಯಿತು.

ನಂತರ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಚಟುವಟಿಕೆ ನಡೆಸಿಕೊಟ್ಟರು.